Karnataka NewsBangalore News

ಹೊಸ BPL ರೇಷನ್ ಕಾರ್ಡ್ ಪಡೆಯಲು ಈ 6 ರೂಲ್ಸ್ ಪಾಲಿಸುವುದು ಕಡ್ಡಾಯ! ಹೊಸ ನಿಯಮಗಳನ್ನು ತಿಳಿಯಿರಿ

ನಮ್ಮ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ (Ration Card) ಹೊಂದಿರುವುದು ಬಹಳ ಅಗತ್ಯವಾಗಿದೆ. ರೇಷನ್ ಕಾರ್ಡ್ ಇದ್ದರೆ, ಸುಲಭವಾಗಿ ಎಲ್ಲಾ ಸವಲತ್ತು, ಸಹಾಯಗಳನ್ನು ಪಡೆಯಬಹುದು.

ಭಾರತದಲ್ಲಿ ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ BPL ಕಾರ್ಡ್ ಕೊಡಲಾಗುತ್ತದೆ. ಈ ಕಾರ್ಡ್ ಅನ್ನು ಆ ವ್ಯಕ್ತಿಯ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಂಡು ಕೊಡುತ್ತಾರೆ. ಬಿಪಿಎಲ್ ಕಾರ್ಡ್ (BPL Ration Card) ಇರುವವರಿಗೆ ಸರ್ಕಾರದ ಕಡೆಯಿಂದಲೂ ಹೆಚ್ಚಿನ ಪ್ರಯೋಜನಗಳು ಸಿಗುತ್ತದೆ..

New Ration card

ಬಿಪಿಎಲ್ ಕಾರ್ಡ್ ಇಂದ ಯಾವೆಲ್ಲಾ ಸೌಲಭ್ಯಗಳು ಸಿಗುತ್ತದೆ ಎಂದರೆ, ದೊಡ್ಡ ಲಿಸ್ಟ್ ಅನ್ನೇ ಹೇಳಬಹುದು. ಸರ್ಕಾರದಿಂದ ಸಿಗುವ ಬಹಳಷ್ಟು ಸಾಲ ಸೌಲಭ್ಯಗಳಿಗೆ (Loan) ಬಿಪಿಎಲ್ ಕಾರ್ಡ್ ಅಗತ್ಯವಿರುತ್ತದೆ. ಪ್ರತಿ ತಿಂಗಳು ರೇಷನ್ ಸಿಗುತ್ತದೆ, ಅನಾರೋಗ್ಯ ಉಂಟಾದರೆ ಸರ್ಕಾರದಿಂದ ಫ್ರೀಯಾಗಿ ಚಿಕಿತ್ಸೆ ಸಿಗುತ್ತದೆ.

7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ

ಸರ್ಕಾರದ ಯೋಜನೆಗೆ (Govt Schemes) ಅಪ್ಲೈ ಮಾಡಲು ಹೀಗೆ ಎಲ್ಲದಕ್ಕೂ ರೇಶನ್ ಕಾರ್ಡ್ ಬೇಕೇ ಬೇಕು. ಇಷ್ಟೆಲ್ಲಾ ಅನುಕೂಲ ಕೊಡುವ ರೇಷನ್ ಕಾರ್ಡ್ ಅನ್ನು ಹೇಗೆಂದರೆ ಹಾಗೆ ಕೊಟ್ಟರೆ, ಜನರು ಕೂಡ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಜಾಸ್ತಿಯೇ ಇರುತ್ತದೆ.

ಸುಳ್ಳು ದಾಖಲೆ, ಸುಳ್ಳು ಮಾಹಿತಿ ಕೊಟ್ಟು ರೇಶನ್ ಕಾರ್ಡ್ ಮಾಡಿಸಿಕೊಳ್ಳುವ ಬಹಳಷ್ಟು ಜನರು ಇದ್ದಾರೆ. ಹಾಗಾಗಿ ಸರ್ಕಾರವು ಈಗ ರೇಶನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಮುಖ್ಯವಾದ ಮಾಹಿತಿ ನೀಡಿದೆ.

BPL Ration Cardಅದೇನು ಎಂದರೆ, ಇನ್ನುಮುಂದೆ ಸ್ವಂತ ಕಾರ್ (Own Car), ವೈಯಕ್ತಿಕವಾಗಿ ಬಳಸಲು ಕಾರ್ ಹೊಂದಿರುವವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ. ಹಾಗೆಯೇ ಸ್ವಂತ ಕಾರ್ ಇದ್ದು, ಸುಳ್ಳು ಮಾಹಿತಿ ಕೊಟ್ಟು ರೇಷನ್ ಕಾರ್ಡ್ ಮಾಡಿಸಿಕೊಂಡಿರುವವರ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಕೂಡ ತಿಳಿಸಿದೆ ಸರ್ಕಾರ.

ಸರ್ಕಾರದ ಸೌಲಭ್ಯ ಪಡೆಯಲು ಇಂದಿಗು ಕೂಡ ಸಾಕಷ್ಟು ಜನರು ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಹೊಸ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ 1.28 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ.

ಇವರಿಗೆಲ್ಲಾ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ! ಪಟ್ಟಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್

ಆದರೆ ಈಗ ಸರ್ಕಾರದ ಕೊಟ್ಟಿರುವ ಆದೇಶದಿಂದ 35 ಲಕ್ಷ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರವು ಸರ್ವೇ ಶುರು ಮಾಡಲಿದ್ದು, 6 ನಿಯಮಗಳನ್ನು ಇಟ್ಟುಕೊಂಡು ಸರ್ವೇ ಮಾಡಲಿದೆ. ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ಸಂಬಂಧಿಸಿದ ನಿಯಮ ತಪ್ಪು ಎಂದರೆ, ಆ ಕಾರ್ಡ್ ಗಳನ್ನು ತಕ್ಷಣವೇ ರದ್ದು ಮಾಡಲಾಗುತ್ತದೆ.

ಆ 6 ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*1.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.

*ಬಿಪಿಎಲ್ ಕಾರ್ಡ್ ಪಡೆಯುವ ರೈತರ ಹತ್ತಿರ 3 ಹೆಕ್ಟರ್ ಗಿಂತ ಹೆಚ್ಚು ಭೂಮಿ ಇರಬಾರದು.

*ವೈಯಕ್ತಿಕವಾಗಿ ವೈಟ್ ಬೋರ್ಡ್ ಸ್ವಂತ ಕಾರ್ ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

*ಸಿಟಿಯಲ್ಲಿ ವಾಸ ಮಾಡುವವರು 1000 ಅಡಿಗಿಂತ ದೊಡ್ಡ ಮನೆ ಹೊಂದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ.

*ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.

*ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.

ಬಿಪಿಎಲ್ ಕಾರ್ಡ್ ವಿಚಾರಕ್ಕೆ ಸರ್ಕಾರವು ಇಷ್ಟು ನಿಯಮಗಳನ್ನು ತಂದಿದ್ದು. ಎಲ್ಲಾ ಅರ್ಹತೆಗಳು ಇರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಕೊಡಲಾಗುತ್ತದೆ. ಇಲ್ಲದೆ ಹೋದರೆ, ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದರು ಕೂಡ, ಅದನ್ನು ರದ್ದು ಮಾಡಲಾಗುತ್ತದೆ.

It is mandatory to follow these 6 rules to get a new BPL ration card

Our Whatsapp Channel is Live Now 👇

Whatsapp Channel

Related Stories