7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ
ಸರ್ಕಾರಿ ಕೆಲಸ ಪಡೆಯಲು ಜಾಸ್ತಿ ಓದಿರಲೇಬೇಕು ಎನ್ನುವ ನಿಯಮ ಇಲ್ಲ. 7ನೇ ತರಗತಿ ಪಾಸ್ ಆಗಿರುವವರಿಗು ಕೂಡ ಸರ್ಕಾರಿ ಕೆಲಸ ಸಿಗುತ್ತದೆ. ಪ್ರಸ್ತುತ 7ನೇ ತರಗತಿ ಪಾಸ್ ಆಗಿರುವವರಿಗೆ ವಿಧಾನಸಭೆಯ ಸಚಿವಾಲಯದಲ್ಲಿ ಕೆಲಸ ಸಿಗುತ್ತದೆ.
ಸರ್ಕಾರಿ ಕೆಲಸ (Govt Job) ಸಿಗಬೇಕು ಎನ್ನುವುದು ಎಲ್ಲರ ಕನಸು ಆಗಿರುತ್ತದೆ. ಈ ಕನಸು ನನಸಾದರೆ, ಸರ್ಕಾರದ ಕೆಲಸ ಸಿಕ್ಕರೆ, ಜೀವನವೇ ಸೆಟ್ಲ್ ಆದ ಹಾಗೆ. ಹಾಗಾಗಿ ಎಲ್ಲರೂ ಕೂಡ ಸರ್ಕಾರಿ ಕೆಲಸ ಬೇಕು ಎಂದು ಬಯಸುತ್ತಾರೆ.
ಸರ್ಕಾರಿ ಕೆಲಸ ಪಡೆಯಲು ಜಾಸ್ತಿ ಓದಿರಲೇಬೇಕು ಎನ್ನುವ ನಿಯಮ ಇಲ್ಲ. 7ನೇ ತರಗತಿ ಪಾಸ್ ಆಗಿರುವವರಿಗು ಕೂಡ ಸರ್ಕಾರಿ ಕೆಲಸ ಸಿಗುತ್ತದೆ. ಪ್ರಸ್ತುತ 7ನೇ ತರಗತಿ ಪಾಸ್ ಆಗಿರುವವರಿಗೆ ವಿಧಾನಸಭೆಯ ಸಚಿವಾಲಯದಲ್ಲಿ ಕೆಲಸ ಸಿಗುತ್ತದೆ.
ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಇನ್ನು 3 ಹೊಸ ಯೋಜನೆ ಜಾರಿಗೆ, ಈ ಬಾರಿ ಯಾರಿಗೆಲ್ಲ ಸಿಗಲಿದೆ ಯೋಜನೆಯ ಫಲ
ಪ್ರಸ್ತುತ ವಿಧಾನಸಭೆ ಸಚಿವಾಲಯದಲ್ಲಿ, ಖಾಲಿ ಇರುವ ವಾಹನ ಚಾಲಕರ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಈ ಕೆಲಸಕ್ಕೆ ಸೇರಲು ನಿಮಗೆ ಆಸಕ್ತಿ ಇದ್ದರೆ, ನೀವು ಕೂಡ ಅರ್ಜಿ ಸಲ್ಲಿಸಬಹುದು (Apply For Job).
ಅರ್ಜಿ ಸಲ್ಲಿಸುವುದಕ್ಕೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅರ್ಹತೆ ಕೂಡ ಬೇಕಾಗುತ್ತದೆ. ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ (Education), ವಯೋಮಿತಿ, (Age Limit) ಸಂಬಳ (Salary), ಇದೆಲ್ಲವನ್ನು ನಿಮಗೆ ಇಂದು ತಿಳಿಸಿಕೊಡುತ್ತೇವೆ. ನಿಮಗೆ ಅರ್ಹತೆ ಆಸಕ್ತಿ ಎರಡು ಇದ್ದರೆ, ನೀವು ಸಹ ಈ ಕೆಲಸಕ್ಕೆ ಅರ್ಜಿ (Apply For Govt Job) ಸಲ್ಲಿಸಬಹುದು.
ಹುದ್ದೆಯ ವಿವರಗಳು ಹೀಗಿದೆ..
ಕೆಲಸ ಖಾಲಿ ಇರುವುದು ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ. ಈ ಕೆಲಸಕ್ಕೆ ಸಿಗಬಹುದಾದ ತಿಂಗಳ ಸಂಬಳ ₹21,400 ರೂಪಾಯಿಯಿಂದ ₹42,000 ರೂಪಾಯಿಗಳವರೆಗು ಇರುತ್ತದೆ. ಒಟ್ಟು 3 ಹುದ್ದೆಗಳು ಖಾಲಿ ಇದೆ. ಕೆಲಸಕ್ಕೆ ಅಗತ್ಯ ಇರುವ ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ, ಕರ್ನಾಟಕ ವಿಧಾನಸಭೆ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಮಾನ್ಯತೆ ಇರುವ ಶಾಲೆಯಿಂದ 7ನೇ ತರಗತಿ ಪಾಸ್ ಆಗಿದ್ದರೆ ಸಾಕು.
ಕೆಲಸಕ್ಕೆ ಅಪ್ಲೈ ಆಗುವ ವಯೋಮಿತಿ ಬಗ್ಗೆ ಹೇಳುವುದಾದರೆ, ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಆದರೆ ಈ ಕೆಲಸಕ್ಕೆ ವಯೋಮಿತಿ ಸಡಿಲಿಕೆ ಇದೆ.
ರದ್ದಾಗುತ್ತಾ ಶಕ್ತಿ ಯೋಜನೆ? ಮಹಿಳೆಯರ ಉಚಿತ ಬಸ್ ಯೋಜನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಕೊಟ್ಟರು ಉತ್ತರ
ಸಾಮಾನ್ಯ ವರ್ಗದವರಿಗೆ ಅರ್ಜಿ ಸಲ್ಲಿಸಲು 35 ವರ್ಷ ವಯೋಮಿತಿ ಇದೆ. ಪ್ರವರ್ಗ 2A, 2B, 3A ಮತ್ತು 3B ವರ್ಗದವರಿಗೆ 38 ವರ್ಷ ವಯೋಮಿತಿ ಸಡಿಲಿಕೆ. SC/ST ಅಭ್ಯರ್ಥಿಗಳಿಗೆ 40 ವರ್ಷದವರೆಗು ವಯೋಮಿತಿ ಸಡಿಲಿಕೆ ಇದೆ.
ಈ ಕೆಲಸಕ್ಕೆ ತಿಂಗಳ ಸಂಬಳ 21,400 ಇಂದ 42,000 ವರೆಗು ಸಂಬಳ ಇರುತ್ತದೆ. ಈ ಕೆಲಸಕ್ಕೆ ನೀವು 2023ರ ಸೆಪ್ಟೆಂಬರ್ 8ರ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಬೇಕಿರುವುದು ಆಫ್ಲೈನ್ ಮೂಲಕ, ಅರ್ಜಿ ಸಲ್ಲಿಸಬೇಕಾದ ವಿಳಾಸ..
ರೇಷನ್ ಕಾರ್ಡ್ ತಿದ್ದುಪಡಿಗೆ ಚಾಲನೆ ಕೊಟ್ಟ ಸರ್ಕಾರ, ಇಂದೇ ಇಂತಹ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ
ಕಾರ್ಯದರ್ಶಿ, ವಿಧಾನಸಭೆ ಸಚಿವಾಲಯ, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು-56001. ಅಂಚೆ ಪಟ್ಟಿಗೆ ಸಂಖ್ಯೆ: 5074.
ವಿಧಾನಸಭೆಯ ನಿಯಮಗಳ ಅನುಸಾರ, ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ನಮೂನೆ1 ದ್ವಿಪ್ರತಿ ಅಪ್ಲಿಕೇಶನ್ ಗಳನ್ನು ಸರ್ಕಾರದ ಪುಸ್ತಕ ಅಂಗಡಿಗಳಿಂದ ತೆಗೆದುಕೊಂಡು, ಲಾಸ್ಟ್ ಡೇಟ್ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ, 3/8/2023, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 8/9/2023.
ಇಲ್ಲಿದೆ ನೋಡಿ : ಸರ್ಕಾರದ ಅಧಿಕೃತ ಅಧಿಸೂಚನೆ
7th class pass is enough, you can get a job in Vidhana Soudha