ರದ್ದಾಗುತ್ತಾ ಶಕ್ತಿ ಯೋಜನೆ? ಮಹಿಳೆಯರ ಉಚಿತ ಬಸ್ ಯೋಜನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಕೊಟ್ಟರು ಉತ್ತರ

ಶಕ್ತಿ ಯೋಜನೆಯು ರದ್ದಾಗುತ್ತದೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ಉತ್ತರ ನೀಡಿದೆ.

ಕರ್ನಾಟಕ ಸರ್ಕಾರವು ಚುನಾವಣೆ ನಡೆಯುವುದಕ್ಕಿಂತ ಮೊದಲೇ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತರುವ ಭರವಸೆ ನೀಡಿತ್ತು, ಅಧಿಕಾರಕ್ಕೆ ಬಂದ ನಂತರ ಆ ಮಾತಿನಂತೆ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಇವುಗಳ ಪೈಕಿ ಮೊದಲಿಗೆ ಜಾರಿಗೆ ಬಂದಿದ್ದು ಶಕ್ತಿ ಯೋಜನೆ (Shakti Yojana). ಇದು ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಇಡೀ ರಾಜ್ಯದಲ್ಲಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ (Free Bus Scheme) ಪ್ರಯಾಣ ಮಾಡಬಹುದಾದ ಯೋಜನೆ ಆಗಿದೆ.

ಈ ಯೋಜನೆಯು ರದ್ದಾಗುತ್ತದೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ಉತ್ತರ ನೀಡಿದೆ.

ರದ್ದಾಗುತ್ತಾ ಶಕ್ತಿ ಯೋಜನೆ? ಮಹಿಳೆಯರ ಉಚಿತ ಬಸ್ ಯೋಜನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಕೊಟ್ಟರು ಉತ್ತರ - Kannada News

ಶಕ್ತಿ ಯೋಜನೆ ಕೊನೆಯಾಗುತ್ತದೆ, ಆಗಸ್ಟ್ 15ರಿಂದ ಹೆಂಗಸರಿಗೆ ಉಚಿತ ಬಸ್ ಸೇವೆ (Free Bus Service) ಸಿಗುವುದಿಲ್ಲ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ..

ರೇಷನ್ ಕಾರ್ಡ್ ತಿದ್ದುಪಡಿಗೆ ಚಾಲನೆ ಕೊಟ್ಟ ಸರ್ಕಾರ, ಇಂದೇ ಇಂತಹ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ

“ಸರ್ಕಾರ ಹೊರತಂದಿರುವ ಶಕ್ತಿ ಯೋಜನೆ ಕೊನೆಯಾಗುತ್ತದೆ, ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಸೌಲಭ್ಯ ನಿಲ್ಲುತ್ತದೆ ಎನ್ನುವ ಸುದ್ದಿ ಸತ್ಯವಲ್ಲ. ಇಂಥ ಗೊಂದಲಮಯ ವಿಚಾರಗಳನ್ನು ಜನರು ಕೂಡ ನಂಬಬಾರದು. ಯೋಜನೆಗಳ ಬಗ್ಗೆ ನಾವೇ ಜನರಿಗೆ ಮಾಹಿತಿ ನೀಡುತ್ತೇವೆ..

ಹೆಣ್ಣುಮಕ್ಕಳು ಈ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಈ ಯೋಜನೆಯ ಸೌಲಭ್ಯ ಪಡೆಯಬೇಕು, ಎಂದಿನಂತೆ ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಸೋಷಿಯಲ್ ಮೀಡಿಯಾದಲ್ಲಿ ಬರುವಂಥ ಸುದ್ದಿಗಳನ್ನು ನಂಬಬೇಡಿ, ಸರ್ಕಾರವೇ ಅಧಿಕೃತವಾಗಿ ಮಾಹಿತಿ ಕೊಡುತ್ತದೆ.

Karnataka Shakti Schemeಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು, ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ.” ಎಂದು ಖುದ್ಧು ಸಿಎಂ ಅವರೇ ಭರವಸೆ ನೀಡಿದ್ದಾರೆ.

ಇವರಿಗೆಲ್ಲಾ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ! ಪಟ್ಟಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್

ಹೆಣ್ಣುಮಕ್ಕಳಲ್ಲಿ ಈ ಬಗ್ಗೆ ವಿಪರೀತ ಗೊಂದಲ ಶುರುವಾಗಿತ್ತು, ಇದ್ದಕ್ಕಿದ್ದ ಹಾಗೆ ಉಚಿತ ಪ್ರಯಾಣ ನಿಂತರೆ ಹೇಗೆ ಎನ್ನುವ ಗೊಂದಲ ಶುರುವಾಗಿತ್ತು, ಆದರೆ ಈಗ ಸಿಎಂ ಅವರೇ ಸ್ಪಷ್ಟನೆ ನೀಡಿದ ನಂತರ ನೆಮ್ಮದಿ ಆಗಿದೆ.

Karnataka CM Updates on Shakti Yojana, free bus scheme for women

Follow us On

FaceBook Google News

Karnataka CM Updates on Shakti Yojana, free bus scheme for women