ರೇಷನ್ ಕಾರ್ಡ್ ತಿದ್ದುಪಡಿಗೆ ಚಾಲನೆ ಕೊಟ್ಟ ಸರ್ಕಾರ, ಇಂದೇ ಇಂತಹ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ

ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದಕ್ಕೆ ನಿಮ್ಮ ಬಳಿ ಉಳಿದಿರುವುದು 4 ದಿನಗಳು ಮಾತ್ರ. ತಿದ್ದುಪಡಿ ಪ್ರಕ್ರಿಯೆ ಆಗಸ್ಟ್ 16 ರಂದು ಶುರುವಾಗಿದ್ದು, ಆಗಸ್ಟ್ 19ರಂದು ಕೊನೆಯಾಗುತ್ತದೆ.

ರೇಷನ್ ಕಾರ್ಡ್ ಎನ್ನುವುದು ಈಗ ಬಹಳ ಮುಖ್ಯವಾಗಿದೆ. ಅದರಲ್ಲು ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Annabhagya Scheme) ಲಾಭ ಪಡೆಯಲು ರೇಶನ್ ಕಾರ್ಡ್ ಬೇಕೇ ಬೇಕು.

ಹಾಗೆಯೇ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ (BPL Ration Card) ಏನಾದರು ತಪ್ಪು ಮಾಹಿತಿ ಇದ್ದರೆ ಅದನ್ನು ಸರಿಪಡಿಸುವುದು ಕೂಡ ಮುಖ್ಯವಾಗಿದೆ. ಆದರೆ ಈ ವರ್ಷ ಚುನಾವಣೆ ಇದ್ದ ಕಾರಣ, ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯನ್ನು ಕೆಲ ಸಮಯ ನಿಲ್ಲಿಸಲಾಗಿತ್ತು.

ಆದರೆ ಜನರು ಇದರಿಂದ ನಿರಾಸೆಯಾಗಿದ್ದರು. ಸಾಕಷ್ಟು ಜನರು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Corrections) ಮಾಡಿಸಬೇಕು ಇನ್ನಷ್ಟು ಜನರು ಹೊಸದಾಗಿ ಸದಸ್ಯರ ಹೆಸರನ್ನು ಸೇರಿಸಬೇಕಾಗಿದೆ. ಹಾಗೆಯೇ ಇನ್ನಷ್ಟು ಜನರು ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಸಿಗದೆಯು ವಂಚಿತರಾಗಿದ್ದಾರೆ.. ಹಾಗಾಗಿ ಸರ್ಕಾರ ಈಗ ರೇಷನ್ ಕಾರ್ಡ್ ತಿದ್ದುಪಡಿ (Ration Card Update) ಮಾಡಲು ಪೋರ್ಟಲ್ ಮತ್ತೆ ಶುರು ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡಲಾಗಿದೆ..

ರೇಷನ್ ಕಾರ್ಡ್ ತಿದ್ದುಪಡಿಗೆ ಚಾಲನೆ ಕೊಟ್ಟ ಸರ್ಕಾರ, ಇಂದೇ ಇಂತಹ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ - Kannada News

ರೇಷನ್ ಕಾರ್ಡ್ ವಿಷಯಕ್ಕೆ ಹೊಸ ನಿಯಮ, ಮನೆಮನೆ ಸರ್ವೇ ಶುರು ಮಾಡಿದ ಸರ್ಕಾರ! ಇಂತಹವರ ಕಾರ್ಡ್ ಕ್ಯಾನ್ಸಲ್

“ಈಗ ಬಿಪಿಎಲ್ ರೇಷನ್ ಪಡೆಯುತ್ತಿರುವವರ ಬಗ್ಗೆ ಮಾಹಿತಿ ಪಡೆಯಲು, ತಿದ್ದುಪಡಿ ಮಾಡಿಸಲು ಮತ್ತು ಹೊಸದಾಗಿ ವ್ಯಕ್ತಿಗಳ ಹೆಸರನ್ನು ಸೇರ್ಪಡೆ ಮಾಡಿಸಲು, ಅನುಮತಿ ಕೊಡಲಾಗಿದೆ..” ಎಂದು ಮಾಹಿತಿ ತಿಳಿಸಿದೆ

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಇಂದ ಜನರು ಬೇಕಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು., ಅಥವಾ ಹೊಸ ಸದಸ್ಯರನ್ನು ರೇಷನ್ ಕಾರ್ಡ್ ಗೆ ಸೇರಿಸಬಹುದು. ಈ ಮೂಲಕ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದೆ.

ಇವರಿಗೆಲ್ಲಾ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ! ಪಟ್ಟಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್

BPL Ration Cardಈ ಅನುಮತಿ ಮೂಲಕ ಏನೆಲ್ಲಾ ಬದಲಾವಣೆ ಮಾಡಬಹುದು ಎಂದರೆ..

*ಸದಸ್ಯರ ಹೆಸರನ್ನು ಹೊಸದಾಗಿ ಸೇರಿಸುವುದು ಅಥವಾ ತೆಗೆದು ಹಾಕುವುದು
*ಹೆಸರು ಹಾಗೂ ಬೇರೆ ಮಾಹಿತಿ ತಿದ್ದುಪಡಿ
*ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ

ಫ್ರೀ ಕರೆಂಟ್! ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ವಿಚಾರ, ಸರ್ಕಾರದ ಹೊಸ ನಿರ್ಧಾರ

ಇಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಚಾರ ಏನು ಎಂದರೆ, ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದಕ್ಕೆ ನಿಮ್ಮ ಬಳಿ ಉಳಿದಿರುವುದು 4 ದಿನಗಳು ಮಾತ್ರ. ತಿದ್ದುಪಡಿ ಪ್ರಕ್ರಿಯೆ ಆಗಸ್ಟ್ 16 ರಂದು ಶುರುವಾಗಿದ್ದು, ಆಗಸ್ಟ್ 19ರಂದು ಕೊನೆಯಾಗುತ್ತದೆ.

4 ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರ ಒಳಗೆ ತಿದ್ದುಪಡಿ ಮಾಡಿಕೊಳ್ಳಬೇಕು.. ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮಾಡಲಾಗದು, ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು 1, CSC ಇವುಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು.

if there are such mistakes Update Ration card

Follow us On

FaceBook Google News

if there are such mistakes Update Ration card