ರೇಷನ್ ಕಾರ್ಡ್ ವಿಷಯಕ್ಕೆ ಹೊಸ ನಿಯಮ, ಮನೆಮನೆ ಸರ್ವೇ ಶುರು ಮಾಡಿದ ಸರ್ಕಾರ! ಇಂತಹವರ ಕಾರ್ಡ್ ಕ್ಯಾನ್ಸಲ್

ನಮ್ಮ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಎಲ್ಲಾ ಯೋಜನೆಗಳ ಸೌಲಭ್ಯ (Govt Schemes) ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರ ತಿಳಿಸಿದೆ. ಇದರಿಂದಾಗಿ ಸರ್ಕಾರದಿಂದ ಹೊಸದಾಗಿ ಬಿಪಿಎಲ್ ಕಾರ್ಡ್ (Apply New Ration Card) ಪಡೆಯಲು ಅರ್ಜಿ ಹಾಕುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.
ಆದರೆ ಸರ್ಕಾರ ಈಗ ಬಿಪಿಎಲ್ ಕಾರ್ಡ್ (BPL Ration Card) ವಿಚಾರಕ್ಕೆ ಹೊಸ ನಿಯಮ (New Rules) ತೆಗೆದುಕೊಂಡಿದ್ದು, ಅವುಗಳನ್ನು ಪಾಲಿಸದೆ ಹೋದರೆ, ಅಂಥವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವವರ ವಿಚಾರಕ್ಕೆ ಸರ್ಕಾರ ಈಗ ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದು, ನಮ್ಮ ರಾಜ್ಯದಲ್ಲಿ ಈಗ ಒಟ್ಟಾರೆಯಾಗಿ 1.28 ಕೋಟಿ ಜನರ ಹತ್ತಿರ ಬಿಪಿಎಲ್ ರೇಶನ್ ಕಾರ್ಡ್ ಇದೆ.
ಆದರೆ ಇವುಗಳ ಪೈಕಿ 35 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಬಹುದು ಎಂದು ಸರ್ಕಾರ ತಿಳಿಸಿದ್ದು, ಇದರಿಂದ ಜನರಿಗೆ ಆತಂಕ ಶುರುವಾಗಿದೆ. ತಮ್ಮ ಕಾರ್ಡ್ ಕೂಡ ಕ್ಯಾನ್ಸಲ್ ಆದರೆ ಏನು ಮಾಡೋದು ಎಂದು ಚಿಂತೆಗೆ ಒಳಗಾಗಿದ್ದಾರೆ.
ಸರ್ಕಾರ ಈಗ ಬಿಪಿಎಲ್ ಕಾರ್ಡ್ ವಿತರಣೆ ಮತ್ತು ಬಿಪಿಎಲ್ ಕಾರ್ಡ್ ನ ಸರ್ವೇ ಶುರು ಮಾಡಲು 6 ನಿಯಮಗಳನ್ನು ಇಟ್ಟುಕೊಂಡಿದೆ..ಇವುಗಳಲ್ಲಿ ಎಲ್ಲವೂ ಸರಿ ಇದ್ದರೆ ಮಾತ್ರ ಅಂಥವರಿಗೆ ಹೊಸದಾಗಿ ರೇಷನ್ ಕಾರ್ಡ್ ಕೊಡಲಾಗುತ್ತದೆ..
ಹಾಗೆಯೇ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರ ವಿಚಾರದಲ್ಲೂ ಸರ್ವೇ ಶುರುವಾಗಿದ್ದು, ಈಗಾಗಲೇ ಅದರಲ್ಲಿ 35 ಸಾವಿರ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ 8 ಕೋಟಿಗಿಂತ ಹೆಚ್ಚು ಹಣ ದಂಡದ ಮೂಲಕ ಪಡೆಯಲಾಗುತ್ತಿದೆ.
ಇನ್ನು ಈ ಯೋಜನೆಗೆ ಅರ್ಹತೆ ಪಡೆಯುವವರಿಗೆ ಮಾತ್ರ ರೇಷನ್ ಕಾರ್ಡ್ ಕೊಡಲಾಗುವುದು, ಎಲ್ಲಾ 6 ಮಾನದಂಡಗಳನ್ನು ಪೂರೈಸಿರುವ ವ್ಯಕ್ತಿಗೆ ಮಾತ್ರ ಸಿಗುತ್ತದೆ. 6 ನಿಯಮಗಳನ್ನು ಪೂರೈಸದೆ ಇರುವವರಿಗೆ ಹೊಸದಾಗಿ ರೇಷನ್ ಕಾರ್ಡ್ ಸಿಗುವುದಿಲ್ಲ. ಅಥವಾ ಈಗಾಗಲೇ ರೇಷನ್ ಕಾರ್ಡ್ ಇರುವವರ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುವುದಾಗಿ ಸರ್ಕಾರ ಮುಖ್ಯವಾದ ಸಂದೇಶ ಹೊರಡಿಸಿದೆ .
ಫ್ರೀ ಕರೆಂಟ್! ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ವಿಚಾರ, ಸರ್ಕಾರದ ಹೊಸ ನಿರ್ಧಾರ

ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಸರ್ಕಾರದಿಂದ ಬಿಗ್ ಅಪ್ಡೇಟ್! ಅಕ್ಕಿ ವಿಚಾರದಲ್ಲಿ ಮಹತ್ವದ ನಿರ್ಧಾರ
*1.20 ಲಕ್ಷಕ್ಕಿಂತ ಜಾಸ್ತಿ ವಾರ್ಷಿಕ ಆದಾಯ (Income) ಇದ್ದರೆ ನಿಮ್ಮ ರೇಶನ್ ಕಾರ್ಡ್ ರದ್ದಾಗುತ್ತದೆ.
*ವೈಯಕ್ತಿಕವಾಗಿ ಬಳಸಲು ಕಾರ್ (Own Car) ಇರುವವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.
*ಸರ್ಕಾರದ ಕೆಲಸ (Government Job) ಇರುವವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ.
*ಇಂತಿಷ್ಟು ಎಂದು ಸ್ವಂತ ಜಮೀನು (Own property) ಇರುವವರ ರೇಷನ್ ಕಾರ್ಡ್ ಬ್ಯಾನ್ ಆಗುತ್ತದೆ.
*ತೆರಿಗೆ ಪಾವತಿ (Tax Payer) ಮಾಡುವವರ ರೇಷನ್ ಕಾರ್ಡ್ ಗಳು ಕೂಡ ಬ್ಯಾನ್ ಆಗುತ್ತದೆ.
ಹಾಗಾಗಿ ಇನ್ನುಮುಂದೆ ರೇಶನ್ ಕಾರ್ಡ್ ಇರುವವರು ಮಾನದಂಡಗಳನ್ನು ಪೂರೈಸಲಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
government has started survey, New rule for ration card



