ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಇನ್ನು 3 ಹೊಸ ಯೋಜನೆ ಜಾರಿಗೆ, ಈ ಬಾರಿ ಯಾರಿಗೆಲ್ಲ ಸಿಗಲಿದೆ ಯೋಜನೆಯ ಫಲ
ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ವಿದ್ಯಾಸಿರಿ, ಕೃಷಿ ಭಾಗ್ಯ, ಅನುಗ್ರಹ ಯೋಜನೆ, ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಇದೆಲ್ಲವನ್ನು ಮತ್ತೆ ಚೆಕ್ ಮಾಡಿ, ಜಾರಿಗೆ ತರಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಜನರ ಪರವಾಗಿ ನಿಂತಿದೆ. ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಸಹಾಯ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಚುನಾವಣೆಗಿಂತ ಮೊದಲೇ ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತರುವುದಾಗಿ ಹೇಳಿ, ಅವುಗಳನ್ನ ಜಾರಿಗೆ ತರುತ್ತಿದೆ. ಈ ಮೂಲಕ ಜನರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುತ್ತಿದೆ.
ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರವು ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಕಲ್ಪಿಸಿಕೊಡುವ ಶಕ್ತಿ ಯೋಜನೆ (Shakti Scheme), ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ (Annabhagya Yojane), ಯುವಪೀಳಿಗೆಗೆ ಕೆಲಸ ಸಿಗದೆ ಇದ್ದರೆ ಯುವನಿಧಿ ಯೋಜನೆ (Yuva Nidhi Scheme), ಮನೆಯನ್ನು ನಡೆಸುವ ಗೃಹಿಣಿಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಹಾಗೆಯೇ ರಾಜ್ಯದ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ಕೊಡುವ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿಗೆ ತರುವ ಭರವಸೆ ನೀಡಿ, ಈಗ ಆ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ.
ರದ್ದಾಗುತ್ತಾ ಶಕ್ತಿ ಯೋಜನೆ? ಮಹಿಳೆಯರ ಉಚಿತ ಬಸ್ ಯೋಜನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಕೊಟ್ಟರು ಉತ್ತರ
ಈ ಮೂಲಕ ಕಾಂಗ್ರೆಸ್ ಸರ್ಕಾರವು ತಾವು ಕೊಟ್ಟ ಮಾತಿನ ಹಾಗೆ ನಡೆದುಕೊಳ್ಳುತ್ತಿದ್ದು, ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಕೆಲವು ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು, ಆದರೆ ಆ ಯೋಜನೆಗಳು ಜಾರಿಗೆ ಬಂದಿರಲಿಲ್ಲ.
ಇದೀಗ ಕಾಂಗ್ರೆಸ್ ಸರ್ಕಾರವು ಆ ಹಿಂದಿನ ಯೋಜನೆಗಳನ್ನು ಕೂಡ ಚೆಕ್ ಮಾಡಿ, ಅವುಗಳನ್ನು ಜಾರಿಗೆ ತರುವ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಚಾಲನೆ ಕೊಟ್ಟ ಸರ್ಕಾರ, ಇಂದೇ ಇಂತಹ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ
ಹಾಗೆಯೇ ಬಿಜೆಪಿ ಸರ್ಕಾರ ಬಂದ ನಂತರ ಬಹಳಷ್ಟು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಲಾಗಿತ್ತು, ಅದೆಲ್ಲವನ್ನು ಈಗ ಮತ್ತೆ ತೆರೆಯುವ ನಿರ್ಧಾರ ಮಾಡಿದೆ ಕಾಂಗ್ರೆಸ್ ಸರ್ಕಾರ..
ಈ ಬಗ್ಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.. ಅಷ್ಟೇ ಅಲ್ಲದೆ, PTCL ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಈ ಮೂಲಕ SC/ST ಜನರಿಗಾಗಿ ಇಟ್ಟಿರುವ ಅನುದಾನ ಮೊತ್ತವು ದುರುಪಯೋಗ ಆಗದ ಹಾಗೆ ರಕ್ಷಿಸಲಾಗುತ್ತಿದೆ.
ಇದಿಷ್ಟು ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ವಿದ್ಯಾಸಿರಿ, ಕೃಷಿ ಭಾಗ್ಯ, ಅನುಗ್ರಹ ಯೋಜನೆ, ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಇದೆಲ್ಲವನ್ನು ಮತ್ತೆ ಚೆಕ್ ಮಾಡಿ, ಜಾರಿಗೆ ತರಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
3 new schemes have been implemented by the state government
Follow us On
Google News |