ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್! ಹಣ ಬರುವ ದಿನ ಇನ್ನಷ್ಟು ಮುಂದೂಡಿಕೆ

ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಕರ್ನಾಟಕ ರಾಜ್ಯ ಸರ್ಕಾರ ಹೊರತಂದಿರುವ ಹೊಸದಾದ ಯೋಜನೆ ಆಗಿದೆ. 5 ಗ್ಯಾರಂಟಿ ಯೋಜನೆಗಳ ಪೈಕಿ ಇದು ಕೂಡ ಒಂದು ಯೋಜನೆ ಆಗಿದ್ದು, ರಾಜ್ಯದಲ್ಲಿ ಮನೆ ನಡೆಸಿಕೊಂಡು ಹೋಗುವ ಎಲ್ಲಾ ಹೆಣ್ಣುಮಕ್ಕಳಿಗೆ ತಿಂಗಳಿಗೆ 2000 ರೂಪಾಯಿ ಕೊಡುವ ಯೋಜನೆ ಇದು,
ಈ ತಿಂಗಳು ಆಗಸ್ಟ್ 27ರಂದು ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ, ಅಂದು ಗೃಹಲಕ್ಷ್ಮಿ ಯೋಜನೆಯ ಹಣ ಹೆಣ್ಣುಮಕ್ಕಳ ಬ್ಯಾಂಕ್ ಅಕೌಂಟ್ (Bank Account) ತಲುಪುತ್ತದೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಈ ದಿನಾಂಕ ಮುಂದಕ್ಕೆ ಹೋಗಿದ್ದು ಹೆಣ್ಣುಮಕ್ಕಳಿಗೆ ಬೇಸರ ತಂದಿದೆ.
ಮೂರು ದಿವಸ ಮುಂದಕ್ಕೆ ಹೋಗಿ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜೆನೆಗೆ (Gruha Lakshmi Yojane) ಅಧಿಕೃತವಾಗಿ ಜಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಮೊದಲಿಗೆ ಆಗಸ್ಟ್ 27ರಂದು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಜಾರಿಗೆ ತರುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು, ಆದರೆ ಈಗ ದಿನಾಂಕ ಮತ್ತು ಸ್ಥಳ ಎರಡನ್ನು ಬದಲಾಯಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಆಗಸ್ಟ್ 30ಕ್ಕೆ ದಿನಾಂಕ ಬದಲಾವಣೆ ಮಾಡಲಾಗಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಹುಟ್ಟಿದ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಒಂದು ನಂಬರ್ ಗೆ SMS ಕಳಿಸಿ, ತಾವು ಅರ್ಜಿ ಸಲ್ಲಿಸಬೇಕಾದ ದಿನಾಂಕ ಮತ್ತು ಸಮಯಕ್ಕಾಗಿ ಕಾಯಬೇಕಿತ್ತು. ಆದರೆ ಇನ್ನುಮುಂದೆ ಆ ರೀತಿ ಕಾಯುವ ಅವಶ್ಯಕತೆ ಇರುವುದಿಲ್ಲ.

ಅರ್ಜಿ ಸಲ್ಲಿಸಲು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಇಕೆವೈಸಿ ಕೂಡ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಒಂದು ವೇಳೆ ಈ ಎರಡು ಕೆಲಸಗಳು ಆಗಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರೋದಿಲ್ಲ.
ಕಾರ್ ಸೇಫ್ಟಿ ಟಿಪ್ಸ್! ಕಾರಿನಲ್ಲಿ ಬ್ಯಾಟರಿ ಹಾಳಾದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಗೊತ್ತಾ?
ಹಾಗಾಗಿ ಮನೆಯ ಯಜಮಾನಿ ಆಗಿರುವವರು ಆದಷ್ಟು ಬೇಗ ಈ ಎರಡು ಕೆಲಸ ಮಾಡಿಸಿ, ಒಂದು ವೇಳೆ ಅರ್ಜಿ ಸಲ್ಲಿಸಿದ ಮೇಲು ಈ ಎರಡು ಕೆಲಸ ಆಗಿಲ್ಲ ಎಂದರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗದೆ ಇರಬಹುದು. ಹಾಗಾಗಿ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಕೌಂಟ್ ಜೊತೆಗೆ ಲಿಂಕ್ ಮಾಡಿ.
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ, ಅದು ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎನ್ನುವುದಾದರೆ ಮಾತ್ರ. ಹಾಗಾಗಿ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯವಾದ ಕೆಲಸ ಆಗಿದೆ.
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಕೂಡ, ಒಂದು ಸಾರಿ ಬ್ಯಾಂಕ್ ಗೆ ಹೋಗಿ, ಆಧಾರ್ ಸೀಡಿಂಗ್ ಮಾಡಿಸಲು ಅಪ್ಲಿಕೇಶನ್ ಹಾಕಿ, ಹಾಗೂ NCPI ಮ್ಯಾಪಿಂಗ್ ಕೂಡ ಮಾಡಿಸಿ. ಜೊತೆಗೆ ನೀವು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಕೂಡ ಮರೆಯಬೇಡಿ.
ಕೇಂದ್ರದ ಮತ್ತೊಂದು ಹೊಸ ಯೋಜನೆ! ಇಂತಹವರಿಗೆ ಸಿಗಲಿದೆ 1 ಲಕ್ಷದವರೆಗಿನ ಸುಲಭ ಸಾಲ
Big update for women who are waiting for Gruha Lakshmi Yojana money



