ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್

ರೇಷನ್ ಕಾರ್ಡ್ ಗಳ ಬಗ್ಗೆ ಸರ್ಕಾರಕ್ಕೂ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಒಟ್ಟು ಕಾರ್ಡ್ ಇರುವ ಸಂಖ್ಯೆ ಮತ್ತು ಕಾರ್ಡ್ ಬಳಸಿ ರೇಷನ್ ಕಾರ್ಡ್ ಪಡೆಯುತ್ತಿರುವವರ ಸಂಖ್ಯೆ ಈ ಎರಡರಲ್ಲೂ ಬಹಳ ವ್ಯತ್ಯಾಸ ಇದೆ

ರಾಜ್ಯ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಕಡ್ಡಾಯವಾಗಿ ಇರಲೇಬೇಕು. ಹಾಗಾಗಿ ಹೆಚ್ಚು ಜನರು ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದರು.. ಈ ತಿಂಗಳಿನಿಂದ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ (Apply Ration Card) ಸಲ್ಲಿಸಬಹುದು ಎಂದು ಹೇಳಲಾಗಿತ್ತು.

ಆದರೆ ಈಗ ಸರ್ಕಾರ ನಿಯಮ ಬದಲಾವಣೆ ಮಾಡಿದೆ. ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದರಿಂದ ಹೆಚ್ಚು ಜನರಿಗೆ ಗೃಹಲಕ್ಷ್ಮಿ (Gruha Lakshmi Scheme) ಮತ್ತು ಗೃಹಜ್ಯೋತಿ ಯೋಜನೆಯ (Gruha Jyothi Scheme) ಸೌಲಭ್ಯ ಸಿಗುವುದಿಲ್ಲ ಎನ್ನುವುದು ಬೇಸರವಾಗಿದೆ.

ಹಲವು ಜನರಿಗೆ ಬಿಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಇದ್ದರು ಕೂಡ ಅವರು ಕಾರ್ಡ್ ಪಡೆಯಲು ಆಗದೆ, ಈಗ ಹೊಸದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾದ ಬಳಿಕ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದುಕೊಂಡಿದ್ದರು.

ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್ - Kannada News

ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್! ಹಣ ಬರುವ ದಿನ ಇನ್ನಷ್ಟು ಮುಂದೂಡಿಕೆ

ಜೊತೆಗೆ ಯೆಲ್ಲೋ ಬೋರ್ಡ್ ಹೊಂದಿರುವ ಕಾರ್ ಇರುವ ಜನರು ಬಿಪಿಎಲ್ ಕಾರ್ಡ್ ಪಡೆದು, ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು ಎಂದುಕೊಂಡಿದ್ದರು. ಎಪಿಎಲ್ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಇನ್ನೇನು ಶುರುವಾಗುತ್ತದೆ ಎಂದು ಆಹಾರ ಇಲಾಖೆ ಸಚಿವರಾದ ಕೆಎಂ ಮುನಿಯಪ್ಪ ಅವರೇ ತಿಳಿಸಿದ್ದರು. ಆದರೆ ಆ ಎಲ್ಲಾ ಜನರಿಗೆ ಈಗ ಬೇಸರ ಎದುರಾಗಿದೆ.

ನಮ್ಮ ರಾಜ್ಯದಲ್ಲಿ ಇದುವರೆಗೂ ಸುಮಾರು 14ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಇದ್ದಾರೆ. ಆದರೆ ಹಲವು ಜನರು ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿಲ್ಲ. ಒಂದಷ್ಟು ಜನರು ಮನೆಯ ಹಿರಿಯ ಸದಸ್ಯರು ನಿಧನ ಹೊಂದಿರುವ ಕಾರಣ ಕಾರ್ಡ್ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ.

ಆದರೆ ಇದನ್ನು ಕ್ಯಾನ್ಸಲ್ ಕೂಡ ಮಾಡಿಲ್ಲ. ಹಾಗಾಗಿ ರೇಷನ್ ಕಾರ್ಡ್ ಗಳ ಬಗ್ಗೆ ಸರ್ಕಾರಕ್ಕೂ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಒಟ್ಟು ಕಾರ್ಡ್ ಇರುವ ಸಂಖ್ಯೆ ಮತ್ತು ಕಾರ್ಡ್ ಬಳಸಿ ರೇಷನ್ ಕಾರ್ಡ್ ಪಡೆಯುತ್ತಿರುವವರ ಸಂಖ್ಯೆ ಈ ಎರಡರಲ್ಲೂ ಬಹಳ ವ್ಯತ್ಯಾಸ ಇದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಇದನ್ನೆಲ್ಲ ಸರಿಮಾಡುವ ಕಡೆಗೆ ಮೊದಲು ಗಮನ ಕೊಡಬೇಕು ಎಂದು ಸಚಿವ ಕೆ.ಎಸ್ ಮುನಿಯಪ್ಪ ತಿಳಿಸಿದ್ದಾರೆ. ಹಾಗಾಗಿ ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಲು ಈಗ ಸಾಧ್ಯವಿಲ್ಲ, ಇದಕ್ಕೆ ಕಾರಣವನ್ನು ತಿಳಿಸುತ್ತೇವೆ ಎಂದಿದ್ದಾರೆ.

ನಿಮ್ಮೂರಲ್ಲೇ ಸಿಗುತ್ತೆ ರೇಷನ್‌ ಕಾರ್ಡ್‌! ತಾಲೂಕು ಕಚೇರಿಗೆ ಸುತ್ತಾಡೋ ಪಜೀತಿ ಇನ್ನಿಲ್ಲ, ತಾಲೂಕುಗಳಲ್ಲಿ ಪ್ರತ್ಯೇಕ ಕಚೇರಿ

BPL Ration Cardಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವುದರಿಂದ ಆರ್ಥಿಕವಾಗಿ ಖಂಡಿತ ಹೊರೆ ಆಗಿಯೇ ಆಗುತ್ತದೆ, ಆ ಕಾರಣಕ್ಕೆ ಉಳಿತಾಯ ಮಾಡುವುದು ಮುಖ್ಯ.. ಎಲ್ಲೆಲ್ಲಿ ಆಗುತ್ತದೆಯೋ ಅಲ್ಲೆಲ್ಲಾ ಉಳಿತಾಯ ಮಾಡುತ್ತೇವೆ..

ಅನ್ನಭಾಗ್ಯ ಯೋಜನೆ (Annabhagya Yojane) ಇಂದ ಜನರಿಗೆ 10ಕೆಜಿ ಅಕ್ಕಿ ಕೊಡುವುದಾಗಿ ಸರ್ಕಾರ ತಿಳಿಸಿತ್ತು, ಆದರೆ ಪೂರ್ತಿ 10ಕೆಜಿ ಅಕ್ಕಿ ಕೊಡಲು ಸಾಧ್ಯವಾಗದ ಕಾರಣ 5ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿಯ ಬದಲಾಗಿ ಹಣವನ್ನು ಕೊಡುತ್ತಿದೆ ಸರ್ಕಾರ. ಆದರೆ ಈ ಸೌಲಭ್ಯಗಳನ್ನು ಪಡೆಯುವುದಕ್ಕೆ ಅರ್ಹತೆ ಇಲ್ಲದವರು ಕೂಡ ರೇಶನ್ ಕಾರ್ಡ್ ಮೂಲಕ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಹೊಸ ಸೂಚನೆ! ಇನ್ನೂ ಅರ್ಜಿ ಹಾಕದವರಿಗೂ ಇದೆ ಗುಡ್ ನ್ಯೂಸ್

ಅಂಥ ಜನರ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ಈ ವರ್ಷ ವಿಧಾನಸಭಾ ಚುನಾವಣೆ ಇದ್ದ ಕಾರಣ, ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಆಹಾರ ಇಲಾಖೆ ವೆಬ್ಸೈಟ್ ನಲ್ಲಿ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬಹುದಿತ್ತು. ಆದರೆ ಪೋರ್ಟಲ್ ಅನ್ನು ಎಲೆಕ್ಷನ್ ವೇಳೆ ಕ್ಲೋಸ್ ಮಾಡಲಾಯಿತು. ಆದರೆ ಈಗ ಶೀಘ್ರದಲ್ಲೇ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಪೋರ್ಟಲ್ ಓಪನ್ ಮಾಡುವ ಯೋಚನೆ ಇಲ್ಲ, ಜನರು ರೇಷನ್ ಕಾರ್ಡ್ ಅನ್ನು ತಿದ್ದುಪಡಿ (Ration Card Corrections) ಮಾಡಿಸಿಕೊಳ್ಳಬಹುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

Another important announcement from the government is about the ration card

Follow us On

FaceBook Google News