ಹಿಮಾಚಲ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಯಾವುದೇ ಪ್ರಾಣಹಾನಿಯಾಗಿಲ್ಲ ! – ವೈರಲ್ ವಿಡಿಯೋ

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಇಂದು ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ.

ಶಿಮ್ಲಾ: ಹಿಮಾಮಾಚಲ ಪ್ರದೇಶದ (Himachal Pradesh) ಶಿಮ್ಲಾ ಜಿಲ್ಲೆಯಲ್ಲಿ ಇಂದು ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ (four-storey building collapsed). ಶಿಮ್ಲಾದ ಚೋಬಾಲ್ ನಲ್ಲಿ ಭಾರೀ ಮಳೆಯ ನಡುವೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. ಅಲ್ಲಿನ ಸೋಬಲ್ ಮಾರ್ಕೆಟ್ ನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಕಟ್ಟಡ ಕುಸಿದಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಕಟ್ಟಡವನ್ನು ಸ್ಥಳೀಯ ಆಡಳಿತ ಈಗಾಗಲೇ ತೆರವು ಮಾಡಿತ್ತು.

ಇದರಿಂದಾಗಿ ಕಟ್ಟಡ ಕುಸಿಯುವ ಮುನ್ನ ನಿವಾಸಿಗಳನ್ನು ತೆರವುಗೊಳಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಯುಕೋ ಬ್ಯಾಂಕ್‌ನ ಶಾಖೆ, ಧಾಬಾ, ಬಾರ್ ಮತ್ತು ಇತರ ಕೆಲವು ವಾಣಿಜ್ಯ ಸಂಸ್ಥೆಗಳು ಕಟ್ಟಡದಲ್ಲಿ ನೆಲೆಗೊಂಡಿದ್ದವು.

ಘಟನೆ ವೇಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿ ನೌಕರರು ಯಾರೂ ಇರಲಿಲ್ಲ. ಎರಡನೇ ಶನಿವಾರವಾದ್ದರಿಂದ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಬ್ಯಾಂಕ್ ಮುಚ್ಚಲಾಗಿತ್ತು. ಕೆಳಮಹಡಿಯಲ್ಲಿರುವ ಬಾರ್‌ನಲ್ಲಿ ಕುಳಿತಿದ್ದ ಕೆಲವರು ಕಿಟಕಿಯ ಗಾಜುಗಳು ಹಠಾತ್ ಬಿರುಕು ಬಿಟ್ಟಿರುವುದನ್ನು ಕಂಡು ಅಪಾಯವನ್ನು ಅರಿತು ತಕ್ಷಣ ಕಟ್ಟಡದಿಂದ ಹೊರಗೆ ಓಡಿ ಕುಳಿತಿದ್ದವರಿಗೆ ಮಾಹಿತಿ ನೀಡಿದರು. ಹೀಗಾಗಿ ಭಾರಿ ಪ್ರಾಣಹಾನಿ ತಪ್ಪಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಯಾವುದೇ ಪ್ರಾಣಹಾನಿಯಾಗಿಲ್ಲ ! - ವೈರಲ್ ವಿಡಿಯೋ - Kannada News

A four-storey building collapsed in Chopal town in Shimla amid heavy rainfall

Follow us On

FaceBook Google News