#Watch ದೆಹಲಿಯಲ್ಲಿ ಭಾರೀ ಬೆಂಕಿ, ಕಿಲೋಮೀಟರ್ ದೂರ ಆವರಿಸಿದ ಹೊಗೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಮತ್ತು ದಟ್ಟ ಹೊಗೆ ಕೆಲವು ಕಿಲೋಮೀಟರ್ ದೂರದಿಂದ ನೋಡಬಹುದಾಗಿದೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಮತ್ತು ದಟ್ಟ ಹೊಗೆ ಕೆಲವು ಕಿಲೋಮೀಟರ್ ದೂರದಿಂದ ನೋಡಬಹುದಾಗಿದೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೋಯ್ಡಾ ಗಡಿ ಬಳಿಯ ಆಗ್ನೇಯ ದೆಹಲಿಯ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹಲವಾರು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ನೋಯ್ಡಾದಿಂದಲೂ ಈ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ವಕೀಲ ಸುಶಾಂತ್ ಚತುರ್ವೇದಿ ಅವರು ಓಖ್ಲಾ ಗಡಿ ಬಳಿಯ ಯಮುನಾ ಕರಾವಳಿ ಪ್ರದೇಶದಲ್ಲಿ ಭಾರೀ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ದೆಹಲಿಯ ನೆರೆಯ ನೋಯ್ಡಾದ ಎತ್ತರದ ಕಟ್ಟಡಗಳಿಂದಲೂ ಅದು ಗೋಚರಿಸುತ್ತಿದೆ.
Kannada Live: ಇಂದಿನ ಕನ್ನಡ ಬ್ರೇಕಿಂಗ್ ನ್ಯೂಸ್ ಲೈವ್ ಮುಖ್ಯಾಂಶಗಳು 18 01 2023
ಏತನ್ಮಧ್ಯೆ, ಯಮುನಾ ನದಿಯ ಕರಾವಳಿ ಪ್ರದೇಶದಲ್ಲಿ ಒಣ ಹುಲ್ಲನ್ನು ಸುಡುವುದರಿಂದ ಈ ಭಾರಿ ಬೆಂಕಿ ಮತ್ತು ಹೊಗೆ ಬರುತ್ತಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರ ಆನಂದ್ ಹೇಳಿದ್ದಾರೆ. ಒಣ ಹುಲ್ಲನ್ನು ಸುಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಪೊಲೀಸರಿಗೆ ಇದನ್ನು ಟ್ಯಾಗ್ ಮಾಡಿದ್ದಾರೆ.
A huge fire broke out in Delhi, smoke could be seen from from Noida
Massive fire on Banks of yamuna in Delhi which is visible from Noida. Seems like stuble burning. Strict action requested @ArvindKejriwal @AAPDelhi @DelhiPolice #pollution #AQI #delhi #Noida pic.twitter.com/Rq2TKptxbO
— amritam anand (@AmritamAnand) January 18, 2023