ಕೇರಳದ ಶಾಲೆಯೊಂದರಲ್ಲಿ ಬಾಲಕಿಯ ಕಾಲಿಗೆ ಸುತ್ತಿಕೊಂಡ ಹಾವು.. ಆಮೇಲೆ ಏನಾಯ್ತು !
ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಕಾಲಿಗೆ ಧಿಡೀರನೆ ಹಾವು ಸುತ್ತಿಕೊಂಡಿದೆ
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಕಾಲಿಗೆ ಧಿಡೀರನೆ ಹಾವು ಸುತ್ತಿಕೊಂಡಿದೆ. ಆ ವೇಳೆ ಬಾಲಕಿ ಜೋರಾಗಿ ಕಿರುಚುತ್ತಾ ಕಾಲನ್ನು ಬೀಸಿದಾಗ ಹಾವು ಹೊರಟುಹೋಗಿದೆ. ಪಾಲಕ್ಕಾಡ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಬಾಲಕಿಯ ಕಿರುಚಾಟ ಕೇಳಿ ಶಿಕ್ಷಕರು ತರಗತಿಗೆ ಧಾವಿಸಿದರು. ಹಾವನ್ನು ಗುರುತಿಸಿ ಕೊಲ್ಲಲಾಯಿತು. ಆಘಾತಕ್ಕೊಳಗಾದ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಾಲಕಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾಳೆ. ಆಕೆಯ ಕಾಲಿನಲ್ಲಿ ಯಾವುದೇ ಹಾವು ಕಚ್ಚಿದ ಗುರುತುಗಳಿಲ್ಲ ಮತ್ತು 24 ಗಂಟೆಗಳ ಕಾಲ ನಿಗಾ ಇಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಮಳೆಯಿಂದಾಗಿ ಶಾಲಾ ಆವರಣದಲ್ಲಿ ಗಿಡಗಳು ಬೆಳೆದು ವಿಷಕಾರಿ ಕ್ರಿಮಿಗಳು ತರಗತಿಗೆ ನುಗ್ಗುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
a snake wrapped itself around the leg of a class 4 student