ಆಧಾರ್ ಕಾರ್ಡ್ ಇದ್ದೋರಿಗೆ ಈ ಸೇವೆ ಸಂಪೂರ್ಣ ಉಚಿತ, ಮಹತ್ವದ ಘೋಷಣೆ!

Aadhaar Update : ಆಧಾರ್ ಮಾಹಿತಿ ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು UIDAI ಹೊಸ ಗಡುವು ಘೋಷಿಸಿದೆ. ಈಗ 2026ರ ಜೂನ್ 14ರ ತನಕ ಈ ಸೌಲಭ್ಯ ಲಭ್ಯವಿದ್ದು, ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ.

  • ಆಧಾರ್ ಅಪ್‌ಡೇಟ್ ಗೆ ಮತ್ತೆ ಗಡುವು ವಿಸ್ತರಣೆ
  • ಆಧಾರ್ ಅಪ್‌ಡೇಟ್‌ಗೆ 2026ರ ಜೂನ್ 14ರವರೆಗೆ ಕಾಲಾವಕಾಶ

UIDAI (ಯುಐಡಿಎಐ) ನೀಡಿರುವ ಹೊಸ ಗಡುವು ಸ್ತರಣೆಯಿಂದ ಆಧಾರ್ ಅಪ್‌ಡೇಟ್ [Aadhaar Card update] ಮಾಡಬೇಕೆಂಬ ಹಲವಾರು ಜನರ ಸಮಸ್ಯೆಗೆ ಪರಿಹಾರ ದೊರಕಿದೆ.

ಈಗ ಯಾರು ತಮ್ಮ ಆಧಾರ್‌ ಕಾರ್ಡ್‌ನಲ್ಲಿ ಮಾಹಿತಿ ತಿದ್ದುಪಡಿ ಮಾಡಬೇಕೆಂದು ನೋಡುತ್ತಿದ್ದಾರೋ, ಅವರಿಗಿದು ಒಂದು ಉತ್ತಮ ಅವಕಾಶವಾಗಿದೆ.

ಅಧಿಕೃತ ಮಾಧ್ಯಮಗಳ ಪ್ರಕಾರ, ಆಧಾರ್‌ ಹೋಲ್ಡರ್‌ಗಳು ತಮ್ಮ ಗುರುತಿನ ಪುರಾವೆ (ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಆಧಾರ್ ಅಧಿಕೃತ ವೆಬ್ ಸೈಟ್ ಮೂಲಕ ಉಚಿತವಾಗಿ ಅಪ್‌ಲೋಡ್ ಮಾಡಬಹುದು. ಈ ವ್ಯವಸ್ಥೆಯು 2026ರ ಜೂನ್ 14ರ ತನಕ ಲಭ್ಯವಿರುವುದಾಗಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಮಗಳ ವಿದ್ಯಾಭ್ಯಾಸ, ಮದುವೆಗೆ ಸಿಗುತ್ತೆ ₹4.6 ಲಕ್ಷ! ಈ ಯೋಜನೆ ಬಗ್ಗೆ ಗೊತ್ತಾ

ವಿವಾಹ, ಉನ್ನತ ಶಿಕ್ಷಣ, ಅಥವಾ ಉದ್ಯೋಗದ ಅವಶ್ಯಕತೆಗಳಿಂದ ಸ್ಥಳಾಂತರಗೊಂಡವರು ತಮ್ಮ ಹೊಸ ವಿಳಾಸ ಅಥವಾ ಇತರ ಮಾಹಿತಿಗಳನ್ನು ಆಧಾರ್‌ನಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಇಂತಹವರಿಗೆ UIDAI ನೀಡಿರುವ ಉಚಿತ ಅಪ್‌ಡೇಟ್ ಅವಕಾಶ ಸಹಾಯಕವಾಗಿದೆ. ಇನ್ನು ಮುಂದೆ ಈ ಸೇವೆಗೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕವೇ ಮುಕ್ತವಾಗಿ ದಾರಿಯಿದೆ.

ದೇಶಾದ್ಯಂತ UIDAI ಪೋರ್ಟ್‌ಲ್ ಮೂಲಕ ಅಪ್‌ಡೇಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಮೂಲಕ ಆಧಾರ್‌ ಡೇಟಾಬೇಸ್‌ನಲ್ಲಿ ನಿಖರವಾದ ಮಾಹಿತಿ ಉಳಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: ಸಿಹಿ ಸುದ್ದಿ, ಬಡವರಿಗೆ ಮನೆ ಹಂಚಿಕೆ! ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ

Aadhaar Card Correction Rules

ಈಗಾಗಲೇ UIDAI ಸೂಚಿಸಿರುವಂತೆ, ಯಾರು ಆಧಾರ್ ತೆಗೆದುಕೊಂಡು 10 ವರ್ಷಗಳಾದರೂ ತಮ್ಮ ಮಾಹಿತಿಗಳನ್ನು ಪರಿಷ್ಕರಿಸಿಲ್ಲವೋ, ಅವರು ಈ ಅವಕಾಶವನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕಾಗಿದೆ. ಹಿಂದೆ ಈ ಸೇವೆಗೆ ₹50 ಶುಲ್ಕವಿತ್ತು, ಆದರೆ ಈಗ ಅದು ತಾತ್ಕಾಲಿಕವಾಗಿ ಉಚಿತವಾಗಿದೆ.

ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವ ವಿಧಾನ ಸರಳವಾಗಿದೆ. UIDAI ಪೋರ್ಟಲ್‌ಗೆ ಲಾಗಿನ್ [login] ಆಗಿ, ಮೊಬೈಲ್ OTP ಬಳಸಬೇಕು. ನಂತರ ಸ್ಕ್ರೀನ್‌ನಲ್ಲಿ ತೋರಿಸಿರುವ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿ ಬೇಕಾದರೆ ಸರಿಪಡಿಸಿ ಅಥವಾ ರಿಫ್ರೆಶ್ ಮಾಡಿ. ನಂತರ ಡಾಕ್ಯುಮೆಂಟ್ ಆಯ್ಕೆ ಮಾಡಿ ಮತ್ತು ಸ್ಕ್ಯಾನ್ ಮಾಡಿರುವ ಫೈಲ್‌ಗಳನ್ನು ಅಪ್‌ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.

ಇದನ್ನೂ ಓದಿ: SSLC ಪಾಸಾಗಿರುವ ಮಹಿಳೆಯರಿಗೆ ಉದ್ಯೋಗ ಅವಕಾಶ! ಕೇಂದ್ರದ ಹೊಸ ಯೋಜನೆ

ಅಪ್‌ಡೇಟ್ ಸಬ್‌ಮಿಟ್ ಆದ ನಂತರ 14 ಅಂಕೆಗಳನ್ನು ಹೊಂದಿರುವ Update Request Number ಸಿಗುತ್ತದೆ. ಇದರ ಸಹಾಯದಿಂದ ನಿಮ್ಮ ಅಪ್‌ಡೇಟ್ ಸ್ಥಿತಿಯನ್ನು ಯಾವುದೇ ಸಮಯದಲ್ಲೂ ಟ್ರ್ಯಾಕ್ ಮಾಡಬಹುದು.

UIDAI ಈ ಮೂಲಕ ಆಧಾರ್‌ ಪಾವತಿಗಳ ನಿಖರತೆ ಮತ್ತು ಭದ್ರತೆಯತ್ತ ಒಂದು ಹೆಜ್ಜೆ ಹಾಕಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತಿದೆ.

Aadhaar Card Update Deadline Extended

About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ…🔸ಇನ್ನಷ್ಟು ಓದಿ »

Related Stories