ಆಧಾರ್ ಕಾರ್ಡ್ ಬಗ್ಗೆ ಕೇಂದ್ರದಿಂದ ಹೊಸ ಅಪ್ಡೇಟ್! ಇನ್ಮೇಲೆ ಈ ಕೆಲಸಕ್ಕೆ ಆಧಾರ್ ಅವಶ್ಯಕತೆ ಇಲ್ಲ!

ಇದೀಗ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ವಿಷಯದ ಬಗ್ಗೆ ಮತ್ತೊಂದು ಮುಖ್ಯವಾದ ಅಪ್ಡೇಟ್ ಅನ್ನು ಜಾರಿಗೆ ತಂದಿದೆ.

Bengaluru, Karnataka, India
Edited By: Satish Raj Goravigere

ಆಧಾರ್ ಕಾರ್ಡ್ (Aadhar Card) ಈಗ ಭಾರತೀಯರ ಮುಖ್ಯ ಐಡೆಂಟಿಟಿ ಪ್ರೂಫ್ (Identity Proof) ಎಂದರೆ ತಪ್ಪಲ್ಲ. ಪ್ರತಿಯೊಬ್ಬರ ಬಳಿ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸ ಕೂಡ ಸಾಧ್ಯವಿಲ್ಲ ಎನ್ನುವ ಹಾಗಿತ್ತು. ಸರ್ಕಾರದ ಕುರಿತ ಕೆಲಸಗಳು ಮತ್ತು ಇನ್ನಿತರ ಹಲವು ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಲಾಗುತ್ತಿತ್ತು.

ನಾವು ಮಾಡುವ ಒಂದು ಸಣ್ಣ ಕೆಲಸದಿಂದ ದೊಡ್ಡ ಕೆಲಸದವರೆಗು ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಅವಶ್ಯಕತೆ ಇದೆ, ಬ್ಯಾಂಕ್ ಕೆಲಸಗಳು, ಸರ್ಕಾರದ ಕೆಲಸಗಳು, ಇದೆಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು.. ಕೆಲಸಕ್ಕೆ ಅಪ್ಲೈ ಮಾಡುವುದಕ್ಕೂ ಸಹ ಆಧಾರ್ ಕಾರ್ಡ್ ಅತ್ಯಗತ್ಯವಾದ ಡಾಕ್ಯುಮೆಂಟ್ ಆಗಿದೆ. ಹಾಗೆಯೇ ಕೇಂದ್ರ ಸರ್ಕಾರ ಆಗಾಗ ಆಧಾರ್ ಕಾರ್ಡ್ ಬಳಕೆ ಬಗ್ಗೆ ಹೊಸ ನಿಯಮಗಳನ್ನು ತರುತ್ತಲೇ ಇದೆ.

How many Aadhaar cards can be linked to a single mobile number

ಅದೆಲ್ಲವನ್ನು ನಾವು ಪಾಲಿಸಲೇಬೇಕಿದೆ. ಇದೀಗ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ವಿಷಯದ ಬಗ್ಗೆ ಮತ್ತೊಂದು ಮುಖ್ಯವಾದ ಅಪ್ಡೇಟ್ ಅನ್ನು ಜಾರಿಗೆ ತಂದಿದೆ. ಇಷ್ಟು ದಿವಸ ಎಲ್ಲಾ ಕೆಲಸಗಳಿಗು ಆಧಾರ್ ಕಾರ್ಡ್ ಅವಶ್ಯಕತೆ ಇದೆ ಎಂದು ಹೇಳಲಾಗಿತ್ತು, ಆದರೆ ಈಗ ಆಧಾರ್ ಕಾರ್ಡ್ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ.

ಈ ಕೆಲವು ಕೆಲಸಗಳಿಗೆ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.. ಪ್ರಸ್ತುತ ಇರುವ ಕಾಲಘಟ್ಟದಲ್ಲಿ ಯಾವುದೇ ವ್ಯಕ್ತಿಯ ಬರ್ತ್ (Birth) ಮತ್ತು ಡೆತ್ (Death) ಈ ಎರಡು ಕೂಡ ರಿಜಿಸ್ಟರ್ ಮಾಡಿಸುವುದು ಬಹಳ ಮುಖ್ಯವಾದ ಕೆಲಸ ಆಗಿದೆ. ಈ ಕೆಲಸ ಮಾಡಲು ಕೂಡ ಇಷ್ಟು ದಿವಸಗಳ ಕಾಲ ಆಧಾರ್ ಕಾರ್ಡ್ ಅವಶ್ಯಕತೆ ಇತ್ತು.

ಆದರೆ ಈಗ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ ಒಂದು ಹೊಸ ಆದೇಶ ನೀಡಿದೆ, ಜನನ ಮತ್ತು ಮರಣ ಈ ಎರಡನ್ನು ರಿಜಿಸ್ಟರ್ ಮಾಡುವಾಗ, ನೀಡುವ ಐಡೆಂಟಿಟಿ ಪ್ರೂಫ್ ಅನ್ನು ದೃಢೀಕರಿಸುವುದಕ್ಕೆ ಆಧಾರ್ ಡೇಟಾ ಬೇಸ್ ಸಹಾಯ ಪಡೆಯಬೇಕು ಎಂದು ರಿಜಿಸ್ಟರ್ ಜೆನೆರಲ್ ಆಫೀಸ್ ಗೆ ಆದೇಶ ನೀಡಿದೆ.

ಹಾಗಾಗಿ ಜನನ ಮತ್ತು ಮರಣವನ್ನು ರಿಜಿಸ್ಟರ್ ಮಾಡುವುದಕ್ಕೆ ಆಧಾರ್ ಖಂಡಿತವಾಗಿ ಬೇಕೇ ಬೇಕು ಎನ್ನುವ ಹಾಗಿಲ್ಲ ಎಂದು ತಿಳಿಸಿದೆ. ಈ ವಿಚಾರವಾಗಿ 2023ರ ಜೂನ್ 27ರಂದು ಅಧಿಕೃತ ಘೋಷಣೆ ಮಾಡಲಾಯಿತು. ಇನ್ನುಮುಂದೆ ಜನನ ಮತ್ತು ಎರಡನ್ನು ರಿಜಿಸ್ಟರ್ ಮಾಡಿಸಲು, ಆಧಾರ್ ಕಡ್ಡಾಯವಲ್ಲ ಎಂದು ಹೇಳಲಾಗಿದೆ.

Aadhar card news by central governmentಒಂದು ರೀತಿ ಇದು ಜನರಿಗೂ ನಿಟ್ಟುಸಿರು ಬಿಡುವ ಆಗಿದ್ದು, ಇನ್ನುಮುಂದೆ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಇನ್ನುಮುಂದೆ ನಿಮ್ಮ ಮಗುವಿನ ಜನನವಾದರೆ, ಅಥವಾ ಯಾರಾದರೂ ವಿಧಿವಶರಾದರೆ ನೀವು ಕೂಡ ಆಧಾರ್ ಕಾರ್ಡ್ ಇಲ್ಲದೆಯೇ ಸುಲಭವಾಗಿ ರಿಜಿಸ್ಟರ್ ಮಾಡಿಸಬಹುದು.

Aadhar card news by central government