ಕಾರ್ ಟೈರ್ ಸಿಡಿದು ಕಾರು ಪಲ್ಟಿ, ಇಬ್ಬರು ಮಹಿಳೆಯರು ಸೇರಿ ಮೂವರು ಸಾವು
ಕಾರಿನ ಮುಂಭಾಗದ ಟೈರ್ ಸಿಡಿದು ಕಾರು ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರಿನ ಮುಂಭಾಗದ ಟೈರ್ ಸಿಡಿದು (Car Tyre Bursts) ಕಾರು ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಲವರು ಮನೇಂದ್ರಗಢದಿಂದ ಅಂಬಿಕಾಪುರಕ್ಕೆ ಕಾರಿನಲ್ಲಿ ಹೋಗುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 43 ರ ಚಂದ್ರಾಪುರ ಗ್ರಾಮದ ಬಳಿ ವೇಗವಾಗಿ ಬಂದ ಎಸ್‌ಯುವಿಯ ಮುಂಭಾಗದ ಟೈರ್ ಇದ್ದಕ್ಕಿದ್ದಹಾಗೆ ಸಿಡಿದಿದೆ (Car Tyre Bursts). ಪರಿಣಾಮ ಕಾರು ಪಲ್ಟಿಯಾಗಿದೆ.
ಇದೇ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೃತರನ್ನು ಒಡಿಶಾದ ಝಾರ್ಸುಗುಡಾದ ಆನಂದ್ ಚೌಧರಿ (28), ಅಂಬಿಕಾಪುರದ ರೀಟಾ ಚೌಧರಿ (46) ಮತ್ತು ಕೊರ್ಬಾದ ಪುಷ್ಪಾ ಮಾಂಝಿ (40) ಎಂದು ಗುರುತಿಸಲಾಗಿದೆ.
ಮತ್ತೊಂದೆಡೆ, ಈ ಅಪಘಾತದಲ್ಲಿ ಅಜಯ್ ನಾಥ್ ಚೌಧರಿ (38) ಮತ್ತು ಅವರ ಮಗ ಅನಿಕೇತ್ (10) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮೊದಲು ಸೂರಜ್‌ಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಅಂಬಿಕಾಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
After Tyre Bursts Suv Overturns In Chhattisgarh 3 Killed 2 Injured