Makar Sankranti: ಮಕರ ಸಂಕ್ರಾಂತಿ ಆಚರಣೆಯಲ್ಲಿ ಗಾಳಿಪಟ ಹಾರಿಸಿದ ಅಮಿತ್ ಶಾ

Makar Sankranti: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು (Sankranti Special).

Makar Sankranti: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು (Sankranti Special). ಶನಿವಾರ, ಅವರು ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗಾಳಿಪಟ (Kite Festival) ಹಾರಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಮುನ್ನ ಅಮಿತ್ ಶಾ ಶ್ರೀ ಗಜನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

 

ಮಕರ ಸಂಕ್ರಾಂತಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಗುಜರಾತ್ ರಾಜ್ಯದಲ್ಲಿ ಉತ್ತರಾಯಣ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಮಕರದಲ್ಲಿ ಸೂರ್ಯೋದಯದ ಮೊದಲ ದಿನದಂದು ಗುಜರಾತಿಗಳು ಈ ಹಬ್ಬವನ್ನು ಆಚರಿಸುತ್ತಾರೆ. ಇದಲ್ಲದೇ ಈ ದಿನವನ್ನು ಅಂತರಾಷ್ಟ್ರೀಯ ಗಾಳಿಪಟ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಬೆಳಿಗ್ಗೆ ಪೂಜೆಗಳನ್ನು ಮಾಡಲಾಗುತ್ತದೆ. ಬಳಿಕ ಸೂರ್ಯಾಸ್ತದವರೆಗೂ ಗಾಳಿಪಟ ಹಾರಿಸುತ್ತಾ ಖುಷಿಯಿಂದ ಕಾಲ ಕಳೆಯುತ್ತಾರೆ.

ಇಂದು ಗುಜರಾತ್‌ನಲ್ಲಿ ಗಾಳಿಪಟಗಳ ಹಬ್ಬ ಆರಂಭವಾವಿದೆ. ಈ ಹಬ್ಬದಂದು, ಗುಜರಾತಿಗಳು ಎಳ್ಳು ಮತ್ತು ಕಡಲೆಬೀಜದಿಂದ ಮಾಡಿದ ಚಿಕ್ಕಿ ಮತ್ತು ಚಳಿಗಾಲದ ತರಕಾರಿಗಳೊಂದಿಗೆ ಮಾಡಿದ ಉಂಡಿಯಂತಹ ಭಕ್ಷ್ಯಗಳನ್ನು ಆನಂದಿಸುತ್ತಾರೆ.

Amit Shah Tries to Flying Kite In Ahmedabad On Makar Sankranti Festival Special