ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಇಲ್ಲ ಎಂದ ಸಿಬ್ಬಂದಿ, ಬೆಂಕಿಕಡ್ಡಿ ಗೀರಿ ಎಸೆದ ಬೈಕ್ ಸವಾರ

ಇಂದೋರ್‌ನಲ್ಲಿ ಹೆಲ್ಮೆಟ್ ಇಲ್ಲದ ಕಾರಣಕ್ಕೆ ಪೆಟ್ರೋಲ್ ನೀಡಲು ನಿರಾಕರಿಸಿದ ಸಿಬ್ಬಂದಿ, ಕೋಪಗೊಂಡ ಯುವಕ ಬೆಂಕಿಕಡ್ಡಿ ಗೀರಿ ಎಸೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ.

  • ಹೆಲ್ಮೆಟ್ ಇಲ್ಲದ ಕಾರಣದಿಂದ ಪೆಟ್ರೋಲ್‌ ನೀಡಲು ನಿರಾಕರಣೆ
  • ಕೋಪಗೊಂಡ ಯುವಕ ಬೆಂಕಿಕಡ್ಡಿ ಗೀರಿ ಎಸೆದ ಘಟನೆ
  • ಇಂದೋರ್‌ನ ಪೆಟ್ರೋಲ್ ಪಂಪ್‌ನಲ್ಲಿ ಸಿಸಿಟಿವಿ ದೃಶ್ಯ ವೈರಲ್

ಮಧ್ಯಪ್ರದೇಶದ ಇಂದೋರ್‌ ನಗರದಲ್ಲಿ ಯುವಕರ ಮೂರ್ಖತನ ತೀವ್ರ ಆತಂಕವನ್ನುಂಟುಮಾಡಿದೆ. ಹೆಲ್ಮೆಟ್ ಇಲ್ಲದ ಕಾರಣಕ್ಕೆ ಪೆಟ್ರೋಲ್ ನೀಡಲು ನಿರಾಕರಿಸಿದ ಪಂಪ್ ಸಿಬ್ಬಂದಿ ಮಾತಿಗೆ, ಆಕ್ರೋಶಗೊಂಡ ಬೈಕ್ ಸವಾರ, ಪೆಟ್ರೋಲ್ ಟ್ಯಾಂಕ್ ಮೇಲೆ ಬೆಂಕಿಕಡ್ಡಿ ಗೀರಿ ಎಸೆದು ಆತಂಕಕಾರಿ ಘಟನೆ ನಡೆದಿದೆ.

ಪೆಟ್ರೋಲ್ ಹಾಕಿಸಲು ಇಂದ್ರಾನಗರದ ಪೆಟ್ರೋಲ್ ಪಂಪ್‌ಗೆ ಬೈಕ್ ಮೇಲೆ ಮೂವರು ಯುವಕರು ಬಂದಿದ್ದರು. ಇವರಲ್ಲಿ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ನಿಯಮದ ಪ್ರಕಾರ, ಸಿಬ್ಬಂದಿ ಪೆಟ್ರೋಲ್‌ ಹಾಕಲು ನಿರಾಕರಿಸಿದರು. ಇದರ ಪರಿಣಾಮವಾಗಿ, ಬೈಕ್‌ನ ಸವಾರ ಬೆಂಕಿಕಡ್ಡಿ ಗೀರಿ ಪೆಟ್ರೋಲ್ ಟ್ಯಾಂಕ್ ಕಡೆಗೆ ಎಸೆದಿದ್ದಾನೆ.

ಇದನ್ನೂ ಓದಿ: ಗರ್ಭಿಣಿ ಹೆಂಡತಿಯನ್ನು ಕೊಂದ ಗಂಡ! ತಾನೇ ಪೋಲಿಸರಿಗೆ ಕರೆ ಮಾಡಿದ

ಈ ಗಂಭೀರ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸ್ಫೋಟ ಅಥವಾ ಬೆಂಕಿಯ ಅವಘಡ ಸಂಭವಿಸಿಲ್ಲ. ಘಟನೆಯು ಪೆಟ್ರೋಲ್ ಪಂಪ್‌ನ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಈ ದೃಶ್ಯಗಳನ್ನು ಆಧರಿಸಿ, ಸಿಬ್ಬಂದಿಯೊಬ್ಬರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ವಿಡಿಯೋ ಮತ್ತು ಪಂಪ್ ಸಿಬ್ಬಂದಿಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಪೆಟ್ರೋಲ್ ಪಂಪ್‌ಗಳಲ್ಲಿ ಸುರಕ್ಷತೆ ತುಂಬಾ ಪ್ರಮುಖ. ಇಂತಹ ನಿರ್ಲಕ್ಷ್ಯ ಮತ್ತು ಕಿಡಿಗೇಡಿತನ ಜನರ ಪ್ರಾಣಕ್ಕೂ ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕವು ಈ ಘಟನೆಯ ನಂತರ ಮೂಡಿದೆ.

ಇದೆ ರೀತಿಯ ಮಾಹಿತಿ ಇನ್ನಷ್ಟು ಪಡೆಯಲು Kannada News Today ವೆಬ್‌ಸೈಟ್ ವೀಕ್ಷಿಸಿ.

Angry Biker Throws Matchstick on Petrol Tank in Indore

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories