ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಪ್ರತಿ ಮಹಿಳೆಗೆ 2,100 ರೂ: ಅರವಿಂದ್ ಕೇಜ್ರಿವಾಲ್

Arvind Kejriwal : ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ಚುನಾವಣೆಯಲ್ಲಿ ಎಎಪಿ ಗೆದ್ದರೆ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ. ಕೊಡುವುದಾಗಿ ಘೋಷಿಸಿದೆ.

Arvind Kejriwal : ದೆಹಲಿ ವಿಧಾನಸಭಾ ಚುನಾವಣೆ (Delhi Assembly polls) ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (Aam Aadmi Party) ಮತದಾರರನ್ನು ಮೆಚ್ಚಿಸಲು ಹಲವು ಭರವಸೆಗಳನ್ನು ಪ್ರಕಟಿಸುತ್ತಿದೆ. ಈಗಾಗಲೇ ಆಟೋ ಚಾಲಕರಿಗೆ ಐದು ಪ್ರಮುಖ ಗ್ಯಾರಂಟಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಆಮ್ ಆದ್ಮಿ ಪಕ್ಷವು ಮಹಿಳೆಯರಿಗೆ ಒಳ್ಳೆಯ ಸುದ್ದಿ ನೀಡಿದೆ. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ಚುನಾವಣೆಯಲ್ಲಿ ಎಎಪಿ ಗೆದ್ದರೆ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ. ಕೊಡುವುದಾಗಿ ಘೋಷಿಸಿದೆ.

ಗುರುವಾರ ಸಿಎಂ ಅತಿಶಿ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್, ‘ಪ್ರತಿಯೊಬ್ಬ ಮಹಿಳೆಗೆ ರೂ.1,000 ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದೆವು. ಆದರೆ, ಕೆಲವು ಮಹಿಳೆಯರು ನನ್ನ ಬಳಿ ಬಂದು ಹಣದುಬ್ಬರದಿಂದ 1000 ರೂ. ಸಾಕಾಗುವುದಿಲ್ಲ ಎಂದಿದ್ದಾರೆ ಹಾಗಾಗಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಅವರ ಕೋರಿಕೆಯಂತೆ ತಿಂಗಳಿಗೆ 2,100 ರೂಪಾಯಿ ನೀಡುತ್ತೇವೆ’ ಎಂದು ಕೇಜ್ರಿವಾಲ್ ಭರವಸೆ ನೀಡಿದರು. ಈ ಮೊತ್ತ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದರು.

ಅರವಿಂದ್ ಕೇಜ್ರಿವಾಲ್

Arvind Kejriwal Announces Rs 2100 Month For Delhi Women Over 18 Years

Related Stories