ಮೊಮ್ಮಗನಿಗಾಗಿ ಅತುಲ್ ಸುಭಾಷ್ ತಾಯಿ ಸುಪ್ರೀಂ ಕೋರ್ಟ್ ಮೊರೆ

ಅತುಲ್ ಸುಭಾಷ್ ಅವರ ತಾಯಿ ತಮ್ಮ ನಾಲ್ಕು ವರ್ಷದ ಮೊಮ್ಮಗನಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ

Atul Subhash Case: ಪತ್ನಿಯ ಸುಳ್ಳು ಪ್ರಕರಣಗಳಿಂದ ಕಿರುಕುಳಕ್ಕೆ ಒಳಗಾಗಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (Bengaluru Atul Subhash) ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಏತನ್ಮಧ್ಯೆ, ಬೆಂಗಳೂರು ಪೊಲೀಸರು (Bengaluru Police) ಈಗಾಗಲೇ ಈ ಪ್ರಕರಣದಲ್ಲಿ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರ ತಾಯಿ ಮತ್ತು ಸಹೋದರನನ್ನು ಬಂಧಿಸಿದ್ದಾರೆ.

ಇದೇ ವೇಳೆ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅತುಲ್ ಸುಭಾಷ್ ಅವರ ತಾಯಿ (Atul Subhash’s Mother) ತನ್ನ ನಾಲ್ಕು ವರ್ಷದ ಮೊಮ್ಮಗನನ್ನು ಕಸ್ಟಡಿಗೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ತನ್ನ ಮೊಮ್ಮಗನನ್ನು ತನಗೆ ಒಪ್ಪಿಸುವಂತೆ ಅಂಜು ಮೋದಿ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ (habeas corpus petition) ಸಲ್ಲಿಸಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿರುವ ನಿಕಿತಾ ಕುಟುಂಬ ಮಗು ಎಲ್ಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಮೊಮ್ಮಗನಿಗಾಗಿ ಅತುಲ್ ಸುಭಾಷ್ ತಾಯಿ ಸುಪ್ರೀಂ ಕೋರ್ಟ್ ಮೊರೆ

ಮಗುವನ್ನು ಹುಡುಕುವ ಪ್ರಯತ್ನವನ್ನು ಸಿಂಘಾನಿಯಾ ಕುಟುಂಬ ವಿಫಲಗೊಳಿಸಿದೆ ಎಂದು ಅತುಲ್ ಸುಭಾಷ್ ಅವರ ತಾಯಿ ಅಂಜು ಮೋದಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅತುಲ್ ಸುಭಾಷ್ ಅವರ ತಂದೆ ಪವಾರ್ ಕುಮಾರ್ ಕೂಡ ಸಾರ್ವಜನಿಕವಾಗಿ ಮಗುವಿನ ಪಾಲನೆಗಾಗಿ ಒತ್ತಾಯಿಸಿದರು.

ಡಿಸೆಂಬರ್ 09 ರಂದು ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ 24 ಪುಟಗಳ ಪತ್ರ ಹಾಗೂ ಒಂದು ಗಂಟೆ ಅವಧಿಯ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ವೀಡಿಯೋದಲ್ಲಿ ತಾವು ಎದುರಿಸಿದ ಕಷ್ಟಗಳನ್ನು ಬಹಿರಂಗಪಡಿಸಿದ್ದಾರೆ.

ಪತ್ನಿ ತನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಮತ್ತು ಅಂತಿಮವಾಗಿ ನ್ಯಾಯಾಧೀಶರು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ತಾಯಿ ನಿಶಾ ಸಿಂಘಾನಿ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಡಿಸೆಂಬರ್ 16 ರಂದು ಬಂಧಿಸಲಾಗಿದೆ. ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Atul Subhash’s Mother Approaches Supreme Court for Custody of 4-Year-Old Grandson

Related Stories