ಶತ ಶತಮಾನಗಳ ಹಿಂದು ಹೋರಾಟಕ್ಕೆ ಇನ್ನು ಕೆಲವೇ ದಿನಗಳಲ್ಲಿ ನ್ಯಾಯ ಸಿಗಲಿದೆ. ಕೋಟ್ಯಾಂತರ ಹಿಂದುಗಳ ಕನಸು ನನಸಾಗಿಸುವ ದಿನ ಹತ್ತಿರ ಬರಲಿದೆ. ಈ ಸುಸಂದರ್ಭಕ್ಕೆ ಸಾಕ್ಷಿ ಆಗಲು ಕೋಟ್ಯಾಂತರ ಜನ ಕಾಯುತ್ತಿದ್ದಾರೆ.
ಹೌದು, ರಾಮಮಂದಿರದ (Rama Mandira) ಕನಸು ಇನ್ನು ಕೆಲವೇ ದಿನಗಳಲ್ಲಿ ಫಲ ನೀಡಲಿದೆ. ಜನವರಿ 22, 2024 ಇಡೀ ವಿಶ್ವವೇ ನಮ್ಮ ದೇಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿ ಆಗಲಿದೆ. ಬಹುದಿನದ ಕನಸು ರಾಮ ಮಂದಿರ ನಿರ್ಮಾಣ ಆಗಿದ್ದು, ರಾಮಮಂದಿರ ಉದ್ಘಾಟನೆ ಇದೇ ಜನವರಿ 22ರಂದು ನಡೆಯಲಿದೆ.
ಅಯೋಧ್ಯ ರಾಮ ಮಂದಿರ ಉದ್ಘಾಟನೆ (Ayodhya Rama Mandira inauguration)
ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯ ರಾಮ ಮಂದಿರ ಉದ್ಘಾಟನೆ ಬಹಳ ವಿಜೃಂಭಣೆಯಿಂದ ನೆರವೇರಲಿದೆ. ದೇಶದ ಮೂಲೆ ಮೂಲೆಯಿಂದ ಈ ಅದ್ಭುತವನ್ನು ಕಣ್ತುಂಬಿಸಿಕೊಳ್ಳಲು ಜನರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಇಲ್ಲಿಯವರೆಗೆ ದೇಶದಲ್ಲಿ ನಡೆಯದೇ ಇರುವಂತಹ ಅದ್ಭುತ ಒಂದು ನಡೆಯಲಿದೆ.
ಉತ್ತರ ಪ್ರದೇಶ (Uttar Pradesh) ದ ವಿಶೇಷ ಪೊಲೀಸ್ ಪಡೆ ಸಂಪೂರ್ಣ ಸಿದ್ಧತೆ ನಡೆಸಿದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಲಕ್ಷಾಂತರ ಪೊಲೀಸರು ಸ್ಥಳದಲ್ಲಿ ಉಪಸ್ಥಿತರಿರಲಿದ್ದಾರೆ. ದೇಶ ವಿದೇಶಗಳಿಂದ ಈ ಸಮಾರಂಭಕ್ಕೆ ಕೋಟ್ಯಂತರ ಜನ ಆಗಮಿಸಲಿದ್ದು ಪೊಲೀಸ್ ಕಾರ್ಯಪಡೆ ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ! (School colleges holiday on 22nd January)
ಉತ್ತರ ಪ್ರದೇಶ ಸರ್ಕಾರ ಜನವರಿ 224 ಅಂದರೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ 22ನೇ ತಾರೀಕಿನಂದು ಈ ಎಲ್ಲಾ ಮಧ್ಯದ ಅಂಗಡಿ ಗಳು ಕೂಡ ಮುಚ್ಚಲಿವೆ.
22ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಡೆಯಲಿದ್ದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವಂತೆ ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ತಿಳಿಸಿದ್ದಾರೆ.
ಸಿಎಂ ಆದಿತ್ಯನಾಥ್ ಯೋಗಿ (CM Yogi Adityanath) ಅವರು ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಜನರಿಗೆ ಪ್ರಯಾಣ ಮಾಡಲು ಅನುಕೂಲವಾಗಲು ಟ್ಯಾಕ್ಸಿ ಹಾಗೂ ಬಸ್ಗಳ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ರಾಮ ಮಂದಿರ ಬಹಳ ವರ್ಷಗಳ ಕನಸು ಇದನ್ನ ಈಡೇರಿಸುವಲ್ಲಿ ಇಂದಿನ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎನ್ನಬಹುದು.
Ayodhya Rama Mandira inauguration Holiday Declaration for Schools and Colleges
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.