ಆಧಾರ್ ಕಾರ್ಡ್ ಇರುವ ಹಿರಿಯ ನಾಗರಿಕರಿಗೆ ₹5 ಲಕ್ಷದ ಬೆನಿಫಿಟ್ ಯೋಜನೆ
ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ, ಆಧಾರ್ ಇದ್ದರೆ ಸಾಕು! ಯಾವುದೇ ಆದಾಯ ಪ್ರಮಾಣವಿಲ್ಲದೆ, ರೂ.5 ಲಕ್ಷ ಆರೋಗ್ಯ ವಿಮೆ ಸಿಗುತ್ತೆ. ಮೊಬೈಲ್ ಮೂಲಕವೇ ಕಾರ್ಡ್ ಡೌನ್‌ಲೋಡ್ ಮಾಡಬಹುದು.
Publisher: Kannada News Today (Digital Media)
- ₹5 ಲಕ್ಷವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯ
- 70 ವರ್ಷ ಮೇಲ್ಪಟ್ಟವರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
- Aadhaar, ಫೋಟೋ ಮತ್ತು ಮೊಬೈಲ್ ನಂಬರ್ ಮಾತ್ರ ಸಾಕು
ಹೆಚ್ಚುತ್ತಿರುವ ಚಿಕಿತ್ಸಾ ಖರ್ಚುಗಳು ಮಧ್ಯಮವರ್ಗದ ಕುಟುಂಬಗಳಿಗೆ ತೀವ್ರವಾಗಿ ಹೊರೆ ಉಂಟುಮಾಡುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಪ್ರತಿಸಾರಿ ಆಸ್ಪತ್ರೆ ಭೇಟಿ ಅಗತ್ಯವಿರುವುದು ಕುಟುಂಬದ ಹಣಕಾಸಿಗೆ ಹೊರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ‘ಆಯುಷ್ಮಾನ್ ಸೀನಿಯರ್ ಸಿಟಿಸನ್ ಯೋಜನೆ’ ಎಂಬ ಹೆಸರಿನಲ್ಲಿ ಉತ್ತಮ ಪ್ಲಾನ್‌ವೊಂದನ್ನು ಪರಿಚಯಿಸಲಾಗಿದೆ.
ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯಡಿ, ಈಗ 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ನಾಗರಿಕರು ಆದಾಯವಿಲ್ಲದೆ ಕೂಡ ರೂ.5 ಲಕ್ಷ ಮೌಲ್ಯದ ಆರೋಗ್ಯ ವಿಮೆಗೆ (Health Insurance) ಅರ್ಹರಾಗಿದ್ದಾರೆ.
ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಇದ್ದೋರಿಗೆ ಬಿಗ್ ರಿಲೀಫ್! ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್
ಈ ಯೋಜನೆ ಮೂಲಕ ಈಗಾಗಲೇ 6 ಕೋಟಿ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಗೆ ಪೋರ್ಟ್‌ಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು Aadhaar ಕಾರ್ಡ್, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸಾಕು. ಮೊದಲು ಆಯುಷ್ಮಾನ್ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಹೋಗಿ ನಿಮ್ಮ ಫೋನ್ ನಂಬರ್ ನೀಡಿ OTP ಮೂಲಕ ಲಾಗಿನ್ ಆಗಬೇಕು.
ನಂತರ ‘Senior Citizens 70+’ ಎಂಬ ವಿಭಾಗವನ್ನು ಆಯ್ಕೆ ಮಾಡಿ, ನಿಮ್ಮ ರಾಜ್ಯ, ಜಿಲ್ಲಾ ಹಾಗೂ Aadhaar ಮಾಹಿತಿ ನೀಡಿ. ಇತ್ತೀಚಿನ ಫೋಟೋವನ್ನು ಅಪ್ಲೋಡ್ ಮಾಡಿದ ನಂತರ, eKYC ಪ್ರಕ್ರಿಯೆ ಮೂಲಕ ತುರ್ತಾಗಿ ಕಾರ್ಡ್ ಡೌನ್‌ಲೋಡ್ ಮಾಡಬಹುದು.
ಅದೇ ರೀತಿ, ಆಯುಷ್ಮಾನ್ ಮೊಬೈಲ್ ಆ್ಯಪ್ ಮೂಲಕವೂ ಈ ಪೂರ್ತಿ ಪ್ರಕ್ರಿಯೆ ಮಾಡಬಹುದಾಗಿದೆ. OTP ಮೂಲಕ ಲಾಗಿನ್, Aadhaar ಡೀಟೈಲ್ಸ್, ಫೋಟೋ ಅಪ್ಲೋಡ್, ಕುಟುಂಬದ ಸದಸ್ಯರ ಮಾಹಿತಿ ಮತ್ತು eKYC ಮಾಡಿದ್ರೆ, ಕಾರ್ಡ್ ನಿಮಗೆ ಸಿಗುತ್ತದೆ.
ಇದನ್ನೂ ಓದಿ: ಹೊಸ ಸ್ಕೀಮ್, ಕರೆಂಟ್ ಬಿಲ್ ಕಟ್ಟೋದೇ ಬೇಡ! 40 ಲಕ್ಷ ಮನೆಗಳಿಗೆ ಫ್ರೀ ಫ್ರೀ ಫ್ರೀ
ಇವುಗಳ ಜೊತೆಗೆ ಈಗಾಗಲೇ ಯಾವುದಾದರೂ ಕೇಂದ್ರ ಸರಕಾರದ ಆರೋಗ್ಯ ಯೋಜನೆ ಅಥವಾ ಖಾಸಗಿ ಪ್ಲಾನ್‌ನಲ್ಲಿ ಇದ್ದರೂ, ಈ ಯೋಜನೆಗೆ ಬದಲಾಯಿಸಬಹುದಾಗಿದೆ.
ಪ್ರಸ್ತುತ ಇರುವ ಇನ್‌ಶುರೆನ್ಸ್ ಪ್ಲಾನ್‌ಗಳಿಗೆ ಬದಲಾಗಿ, ಈ ಯೋಜನೆ ಹೆಚ್ಚು ಲಾಭದಾಯಕವಾಗಿದೆ. ಯಾವುದೇ ಆಸ್ಪತ್ರೆಯ ಖರ್ಚಿಗೆ ಇನ್ಮುಂದೆ ಕಾದು ನಿಲ್ಲುವ ಅವಶ್ಯಕತೆ ಇಲ್ಲ! ಈ ಯೋಜನೆಗೆ ಈಗಲೇ ನೋಂದಾಯಿಸಿಕೊಳ್ಳಿ.
Ayushman Senior Citizen Health Card, ₹5 Lakh Free Insurance