ಸಾಲ ಕೊಡಿಸುವುದಾಗಿ ಹೇಳಿ 39 ಸಾವಿರ ಮೌಲ್ಯದ ಕೋಳಿ ತಿಂದ ಬ್ಯಾಂಕ್ ಮ್ಯಾನೇಜರ್
ಮ್ಯಾನೇಜರ್ ಗೆ ನಾಟಿ ಕೋಳಿ ಸಾಂಬಾರ್ ಅಂದ್ರೆ ತುಂಬಾ ಇಷ್ಟ, ಡೈಲಿ ಚಿಕನ್ ತಿನ್ನುವ ಪ್ಲಾನ್ ಮಾಡಿದ ಮ್ಯಾನೇಜರ್, ರೈತನಿಗೆ ಪುಸಲಾಯಿಸಿ 39 ಸಾವಿರ ರೂಪಾಯಿ ಮೌಲ್ಯದ ಕೋಳಿಗಳನ್ನು ತಿಂದಿದ್ದಾನೆ
ಆ ಬ್ಯಾಂಕ್ ಮ್ಯಾನೇಜರ್ ಗೆ ನಾಟಿ ಕೋಳಿ (Desi Chicken) ಸಾಂಬಾರ್ ಅಂದ್ರೆ ತುಂಬಾ ಇಷ್ಟ, ಡೈಲಿ ಚಿಕನ್ ತಿನ್ನುವ ಪ್ಲಾನ್ ಮಾಡಿದ ಮ್ಯಾನೇಜರ್, (Bank Manager) ರೈತನಿಗೆ ಪುಸಲಾಯಿಸಿ 39 ಸಾವಿರ ರೂಪಾಯಿ ಮೌಲ್ಯದ ಕೋಳಿಗಳನ್ನು ತಿಂದಿದ್ದಾನೆ..! ಛತ್ತೀಸ್‌ಗಢ ರಾಜ್ಯದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಮಸ್ತೂರಿ ಪಟ್ಟಣದ ರೈತ ಮನಹರ್ ಕೋಳಿ ಫಾರಂ (Poultry Farm) ನಡೆಸುತ್ತಿದ್ದ, ರೈತ ತನ್ನ ಜಮೀನಿನಲ್ಲಿ ಸ್ಥಾಪಿಸಿದ ಕೋಳಿ ಫಾರಂ ಅನ್ನು ಇನ್ನಷ್ಟು ವಿಸ್ತರಿಸಲು ಯೋಚಿಸಿದ. ಸಾಲ (Bank Loan) ಪಡೆಯಲು ನಿರ್ಧರಿಸಿ ಸ್ಥಳೀಯ ಎಸ್ ಬಿಐ ಶಾಖೆಯ ವ್ಯವಸ್ಥಾಪಕರನ್ನು ಭೇಟಿಯಾಗಿದ್ದ, ಈ ವೇಳೆ ಸಾಲ ಕೊಡುವುದಾಗಿ ಹೇಳಿದ ಮ್ಯಾನೇಜರ್ ನಾಟಿ ಕೋಳಿ ಸಾಂಬಾರ್ ಇಷ್ಟ ಎಂದು ಹೇಳಿ ತರುವಂತೆ ಹೇಳಿದ್ದಾರೆ.
ಸಾಲ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತ ಮನಹರ್ ಬ್ಯಾಂಕ್ ಮ್ಯಾನೇಜರ್ ಹೇಳಿದಂತೆ ನಾಟಿ ಕೋಳಿ ಸಾಂಬಾರ್ ಮಾಡಿಸಿ ತಂದು ಕೊಟ್ಟಿದ್ದಾನೆ. ಅಂದಿನಿಂದ ಬ್ಯಾಂಕ್ ಮ್ಯಾನೇಜರ್ Loan ಹೆಸರು ಹೇಳಿಕೊಂಡು ತಿನ್ನುತ್ತಿದ್ದ.
ಎರಡು ತಿಂಗಳಲ್ಲಿ ಒಟ್ಟು 39 ಸಾವಿರ ರೂ.ಗಳ ನಾಟಿ ಕೋಳಿ ತಿಂದಿದ್ದಾನೆ ಆ ಮಾಹಾನುಭಾವ ಮ್ಯಾನೇಜರ್. ಇದಲ್ಲದೆ, ಆತ ರೈತನಿಂದ ಸಾಲಕ್ಕೆ 10 ಪ್ರತಿಶತ ಕಮಿಷನ್‌ಗೆ ಒತ್ತಾಯಿಸಿದ್ದಾನೆ. ಹೀಗಾಗಿ ತಮ್ಮ ಜಮೀನಿನಲ್ಲಿದ್ದ ಕೋಳಿಗಳನ್ನು ಮಾರಾಟ ಮಾಡಿ ಶೇ.10ರಷ್ಟು ಕಮಿಷನ್ ಕೂಡ ನೀಡಿ 10 ಲಕ್ಷ ರೂ. ಸಾಲಕ್ಕೆ ಕೈಚಾಚಿದ್ದಾನೆ ರೈತ.
ಆದರೆ, ಬ್ಯಾಂಕ್ ಮ್ಯಾನೇಜರ್ ಸಾಲ ನೀಡುವ ಬದಲು ಕೋಳಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಬ್ಯಾಂಕ್ ಮ್ಯಾನೇಜರ್ ತನಗೆ ಸಾಲ ನೀಡಲ್ಲ ಅಂತ ಮನಗಂಡ ರೈತ ಪೊಲೀಸರಿಗೆ ದೂರು ನೀಡಿದ್ದಾನೆ.
ಆರೋಪಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಎಸ್ ಬಿಐ (SBI Bank) ಶಾಖೆಯ ಮುಂದೆಯೇ ಸಾಯುವುದಾಗಿ ಎಚ್ಚರಿಕೆ ನೀಡಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Bank Manager Eats Desi Chicken Worth Rs 39 Thousand From Chhattishgarh Farmer by Promising Loan