ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ದಿಢೀರ್ ಬಂತು 87 ಕೋಟಿ, ಮುಂದೇನಾಯ್ತು?
ಬಿಹಾರದ ವಿದ್ಯಾರ್ಥಿ ಬ್ಯಾಂಕ್ ಖಾತೆಯಲ್ಲಿ ಸುಮಾರು 87 ಕೋಟಿ ನಗದು ಹಣವನ್ನು ಆತನನ್ನು ಐದು ಗಂಟೆಗಳ ಕಾಲ ಮಿಲಿಯನೇರ್ ಮಾಡಿತು. ಬಿಹಾರದ ಮುಜಾಫರ್ ನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಬಿಹಾರದ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾದ. ಹೌದು, ಬ್ಯಾಂಕ್ ಖಾತೆಯಲ್ಲಿ (Bank Account) ಸುಮಾರು 87 ಕೋಟಿ ನಗದು ಹಣ ಆತನನ್ನು ಐದು ಗಂಟೆಗಳ ಕಾಲ ಮಿಲಿಯನೇರ್ ಮಾಡಿತು.
ಬಿಹಾರದ ಮುಜಾಫರ್ ನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಒಂಬತ್ತನೇ ತರಗತಿ ಓದುತ್ತಿರುವ ಸೈಫ್ ಅಲಿ ತನ್ನ ಖಾತೆಯಿಂದ 500 ರೂ.ಗಳನ್ನು ಡ್ರಾ ಮಾಡಲು ಎಟಿಎಂಗೆ (Bank ATM) ಹೋಗಿದ್ದ. ಆದರೆ ಬ್ಯಾಲೆನ್ಸ್ ಚೆಕ್ ಮಾಡಿದಾಗ ಸ್ಕ್ರೀನ್ ಮೇಲೆ ಮೊತ್ತ ನೋಡಿ ಬೆಚ್ಚಿಬಿದ್ದಿದ್ದಾನೆ.
ತನ್ನ ಖಾತೆಯಲ್ಲಿ 87.65 ಕೋಟಿ ಹಣ ತೋರಿಸಿದಾಗ ಅವನ ಕಣ್ಣನ್ನೇ ಅವನು ನಂಬಲಾಗಲಿಲ್ಲ. ಸ್ವಲ್ಪ ಸಮಯದ ಸಂದೇಹದ ನಂತರ, ಮತ್ತೆ ನೋಡಿದಾಗ ಅದೇ ಮೊತ್ತವನ್ನು ತೋರಿಸಿದೆ (Bank Balance).
ಆದ್ದರಿಂದ ಅವನು ಮನೆಗೆ ಓಡಿ ಬಂದು ತನ್ನ ತಾಯಿಗೆ ವಿಷಯ ಹೇಳಿದ್ದಾನೆ. ಬ್ಯಾಂಕ್ನ ಗ್ರಾಹಕ ಸೇವಾ ಕೇಂದ್ರಕ್ಕೆ ತೆರಳಿ ಹಾಗೂ ನೆರೆಯವರಿಗೆ ತಿಳಿಸಿದಾಗ ಅವರ ಖಾತೆಯಲ್ಲಿ ಕೇವಲ 532 ರೂ. ತೋರಿಸಿದೆ.
ಸ್ವಲ್ಪ ಸಮಯದ ನಂತರ ಆತನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನಂತರ, ಉತ್ತರ ಬಿಹಾರ್ ಗ್ರಾಮೀಣ ಬ್ಯಾಂಕ್ ಈ ಘಟನೆಯನ್ನು ಬ್ಯಾಂಕ್ಗೆ ದೂರು ನೀಡಿದ ನಂತರ ತನಿಖೆ ನಡೆಸುತ್ತಿದೆ.
Bihar Student Becomes Crorepati for 5 Hours as 87 Crore Appears in Bank Account