India News

ತಾಜ್ ಮಹಲ್ ಗೆ ಬಾಂಬ್ ಬೆದರಿಕೆ, ಮುಂದುವರೆದ ಶೋಧ ಕಾರ್ಯಾಚರಣೆ

Bomb Threat : ವಿಶ್ವದ ಅತ್ಯಂತ ಸುಂದರವಾದ ಕಟ್ಟಡಗಳಲ್ಲಿ ಒಂದಾದ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ (Taj Mahal) ಮಂಗಳವಾರ ಬಾಂಬ್ ಬೆದರಿಕೆ ಬಂದಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಬೆದರಿಕೆ ಮೇಲ್ ಕಳುಹಿಸಲಾಗಿದೆ.

ಬಾಂಬ್ ಬೆದರಿಕೆಯಿಂದಾಗಿ ತಾಜ್ ಮಹಲ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮತ್ತೊಂದೆಡೆ, ತಾಜ್ ಮಹಲ್ ಒಳಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಾಜ್ ಮಹಲ್ ಭದ್ರತಾ ಪೊಲೀಸರು ಮತ್ತು ಇತರ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಮೇಲ್ ಕಳುಹಿಸಿದವರ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಜ್ ಮಹಲ್ ಗೆ ಬಾಂಬ್ ಬೆದರಿಕೆ, ಮುಂದುವರೆದ ಶೋಧ ಕಾರ್ಯಾಚರಣೆ

ಈ ಕುರಿತು ಪ್ರವಾಸೋದ್ಯಮ ಇಲಾಖೆಗೆ ಇಮೇಲ್ ಬಂದಿದ್ದು, ಅದರ ಆಧಾರದ ಮೇಲೆ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸಿಪಿ ತಾಜ್ ಸೆಕ್ಯುರಿಟಿ ಸೈಯದ್ ಆರಿಬ್ ಅಹ್ಮದ್ ತಿಳಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

Bomb Threat For Taj Mahal

Our Whatsapp Channel is Live Now 👇

Whatsapp Channel

Related Stories