Boy In Borewell: ಛತ್ತೀಸ್ಗಢದಲ್ಲಿ ಕೊಳವೆಬಾವಿಗೆ ಬಿದ್ದ ಬಾಲಕ, ಮುಂದುವರಿದ ರಕ್ಷಣಾ ಕಾರ್ಯಗಳು
Boy In Borewell: ಛತ್ತೀಸ್ಗಢದಲ್ಲಿ ಹತ್ತು ವರ್ಷದ ರಾಹುಲ್ ಸಾಹು ಎಂಬ ಬಾಲಕ ತನ್ನ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಾಗ ಅಲ್ಲಿದ್ದ ಹಳೆಯ ಕೊಳವೆಬಾವಿಯಲ್ಲಿ ಬಿದ್ದಿದ್ದಾನೆ.
Boy In Borewell: ಛತ್ತೀಸ್ಗಢದಲ್ಲಿ ಹಿತ್ತಲಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದಾನೆ. ಜಂಜಗಿರ್ ಚಂಪಾ ಜಿಲ್ಲೆಯ ಪಿರಿದ್ ಎಂಬ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಹತ್ತು ವರ್ಷದ ರಾಹುಲ್ ಸಾಹು ಎಂಬ ಬಾಲಕ ತನ್ನ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಾಗ ಅಲ್ಲಿದ್ದ ಹಳೆಯ ಕೊಳವೆಬಾವಿಯಲ್ಲಿ ಬಿದ್ದಿದ್ದಾನೆ. ಗಮನಿಸಿದ ಕುಟುಂಬಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಜಿಲ್ಲಾ ಎಸ್ಪಿ ವಿಜಯ್ ಅಗರ್ವಾಲ್ ಪರಿಹಾರ ಕಾರ್ಯಾಚರಣೆ ಆರಂಭಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್ಡಿಆರ್ಎಫ್) ಸಹ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಬಾಲಕನನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಸುಮಾರು 16 ಗಂಟೆಗಳ ಕಾಲದಿಂದ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಬಾಲಕ ಬಿದ್ದ ಬಾವಿ 80 ಅಡಿ ಆಳವಿದೆ ಎಂದು ಅಂದಾಜಿಸಲಾಗಿದೆ.
ಇದುವರೆಗೆ 50 ಅಡಿಗೂ ಹೆಚ್ಚು ಉತ್ಖನನ ಪೂರ್ಣಗೊಂಡಿದೆ. 65 ಅಡಿವರೆಗೆ ಅಗೆದ ನಂತರ ಬಾಲಕ ಇರುವ ಸ್ಥಳಕ್ಕೆ ಸಮಾನಾಂತರವಾಗಿ ಮತ್ತೊಂದು ಸುರಂಗ ತೋಡಲಾಗುತ್ತದೆ. ಬಾಲಕ ಇನ್ನೂ ಜೀವಂತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕೂಡ ಪರಿಸ್ಥಿತಿಯ ನಿಗಾ ವಹಿಸಿದ್ದಾರೆ. ಮತ್ತೊಂದೆಡೆ ಸಿಎಂ ಕೂಡ ಘಟನೆಯ ವಿವರ ಕೇಳುತ್ತಿದ್ದಾರೆ. ಬಾಲಕನ ಕುಟುಂಬದವರೊಂದಿಗೆ ಮಾತನಾಡಿದ್ದಾರೆ.
Boy Stuck In Borewell In Chhattisgarh Rescue Operations Underway
Follow Us on : Google News | Facebook | Twitter | YouTube