Saharanpur Bulldozer: ಉತ್ತರ ಪ್ರದೇಶದಲ್ಲಿ ಗಲಭೆ ಮಾಸ್ಟರ್‌ಮೈಂಡ್‌ಗಳಿಗೆ ಯೋಗಿ ಸರ್ಕಾರ ಕೌಂಟರ್

Saharanpur Bulldozer: ಉತ್ತರ ಪ್ರದೇಶದ ಗಲಭೆ ಜೊತೆಗೆ ಶಾಂತಿ ಕದಡಿದ (Saharanpur Violence) ಗಲಭೆಕೋರರಿಗೆ ಕೌಂಟರ್ ನೀಡಲು ಯೋಗಿ ಸರ್ಕಾರ ಇಳಿದಿದೆ. ಶಹರಾನ್‌ಪುರದಲ್ಲಿ ಬುಲ್ಡೋಜರ್‌ಗಳನ್ನು ಇಳಿಸಲಾಗಿದೆ. ನಿನ್ನೆ ನಮಾಜ್ ಬಳಿಕ ಉಂಟಾದ ಗಲಭೆಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ.

ಅಧಿಕಾರಿಗಳು ಇಬ್ಬರು ಗಲಭೆ ಮಾಸ್ಟರ್‌ಮೈಂಡ್‌ಗಳ ಮನೆಗಳನ್ನು ಕೆಡವಿದ್ದಾರೆ. ಎರಡು ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆಗೆ ನಿನ್ನೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಇದನ್ನೂ ಓದಿ : ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಶೇರ್ ಮಾಡಿದ ಅಬಕಾರಿ ಅಧಿಕಾರಿ !

ಶಹರಾನ್‌ಪುರದಲ್ಲಿಯೂ ಗಲಭೆ ಸೃಷ್ಟಿಯಾಗಿತ್ತು. ಇದೇ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಕಾರ್ಯಾಚರಣೆಗಿಳಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 227 ಜನರನ್ನು ಬಂಧಿಸಿದ್ದಾರೆ. ಈ ಪೈಕಿ 68 ಮಂದಿ ಪ್ರಯಾಗ್ ರಾಜ್‌ಗೆ ಸೇರಿದವರು.

Saharanpur Violence

ಶಹರಾನ್‌ಪುರದ ಇಬ್ಬರು… ಗಲಭೆಯ ಮಾಸ್ಟರ್‌ಮೈಂಡ್‌ಗಳು ಎಂದು ಗುರುತಿಸಲಾಗಿದೆ. ಇಬ್ಬರ ವಿಚಾರಣೆ ವೇಳೆ ಅವರು ವಾಸವಾಗಿದ್ದ ಮನೆ ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಬುಲ್ಡೋಜರ್‌ಗಳ ಸಹಾಯದಿಂದ ಮನೆಗಳನ್ನು ಕೆಡವಿದರು. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಹಲವೆಡೆ ಇಂದು ಕೂಡ ಪ್ರತಿಭಟನೆ ಮುಂದುವರೆದಿತ್ತು.

ಇದನ್ನೂ ಓದಿ : ಮಕ್ಕಳ ಉತ್ತಮ ಭವಿಷ್ಯಕ್ಕೆ ಎಎಪಿ ಬೆಂಬಲಿಸಿ : ಅರವಿಂದ್ ಕೇಜ್ರಿವಾಲ್

ನೂಪುರ್ ಶರ್ಮಾ ಅವರ ಹೇಳಿಕೆಗೆ ಭಾರತ ಸೇರಿದಂತೆ ಬಾಂಗ್ಲಾದೇಶದಲ್ಲಿ ಸಹ ಪ್ರತಿಭಟಿಸಲಾಯಿತು. ದೇಶಾದ್ಯಂತ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಸಿದರು. ಎಲ್ಲಾ ಮುಸ್ಲಿಂ ರಾಷ್ಟ್ರಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಡೆಸಿದವು. ಈ ವೇಳೆ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು.

Bulldozer Launched At The House Of Miscreants Who Created Ruckus After Friday Prayers In Saharanpur

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ