ಡಿವೈಡರ್‌ಗೆ ಡಿಕ್ಕಿ ಹೊಡೆದು ಜಿಗಿದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು 2 ಸಾವು
ಅತಿವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಇನ್ನೊಂದು ರಸ್ತೆಗೆ ಹಾರಿ ಮುಂದೆ ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ
ಅಹಮದಾಬಾದ್: ಕುಡಿದ ಮತ್ತಿನಲ್ಲಿ ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಘಟನೆ ನಡೆದಿದೆ. ಆಟೊವನ್ನು ತಪ್ಪಿಸಿ ಅತಿವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಇನ್ನೊಂದು ರಸ್ತೆಗೆ ಹಾರಿದೆ.
ಈ ವೇಳೆ ಮುಂದೆ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಜರಾತ್ ನ ಅಹಮದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಧ್ಯರಾತ್ರಿ ನರೋಡಾ-ದೇಹಗಾಂ ರಸ್ತೆಯಲ್ಲಿ ಹ್ಯುಂಡೈ ಕ್ರೆಟಾ ಕಾರು ವೇಗವಾಗಿ ಚಲಿಸುತ್ತಿತ್ತು, ಈ ವೇಳೆ ಕಾರು ಚಾಲಕ ಮುಂದೆ ಇದ್ದ ಕಾರನ್ನು ಹಿಂದಿಕ್ಕಲು ಯತ್ನಿಸಿ ಆಟೊವನ್ನು ತಪ್ಪಿಸಲು ಯತ್ನಿಸಿದ್ದಾನೆ.
ಅಷ್ಟರಲ್ಲಿ ಕಾರು ನಿಯಂತ್ರಣ ತಪ್ಪಿದೆ. ಡಿವೈಡರ್ ಮೇಲಿನಿಂದ ಜಿಗಿದು ಇನ್ನೊಂದು ರಸ್ತೆಗೆ ಹಾರಿದೆ. ಕೆಲ ಸೆಕೆಂಡುಗಳ ಕಾಲ ಗಾಳಿಯಲ್ಲಿದ್ದ ಕಾರು ಎದುರಿಗೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
અમદાવાદમાં પૂરઝડપે આવતી ક્રેટા કાર હવામાં ઊડી, સામેથી આવતા એક્ટિવાને અડફેટે લેતા બેનાં મોત#CGNews #Ahmedabad #Overspeed #Car #Caraccident #Activa #CCTV #AhmedabadNews pic.twitter.com/uvDr3nlTQ0
— ConnectGujarat (@ConnectGujarat) December 2, 2024
Car Jumps Divider Crashes Into Scooter 2 Dead In Ahmedabad