chariot collapses: ತಮಿಳುನಾಡಿನಲ್ಲಿ ರಥ ಅಪಘಾತ: 2 ಸಾವು, ಮೂವರಿಗೆ ಗಾಯ

chariot collapses: ತಮಿಳುನಾಡಿನಲ್ಲಿ ನಡೆದ ರಥೋತ್ಸವದಲ್ಲಿ ದುರ್ಘಟನೆ ನಡೆದಿದೆ. ರಥ ಎಳೆಯುವಾಗ ಭಕ್ತರ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

ಚೆನ್ನೈ: ತಮಿಳುನಾಡಿನಲ್ಲಿ ನಡೆದ ರಥೋತ್ಸವದಲ್ಲಿ ದುರ್ಘಟನೆ ನಡೆದಿದೆ (chariot collapses in Dharmapuri). ರಥ ಎಳೆಯುವಾಗ ಭಕ್ತರ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

ಧರ್ಮಪುರಿ ಜಿಲ್ಲೆಯ ಪಾಪರಕಟ್ಟಿ ಸಮೀಪದ ಮದೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಳಿಯಮ್ಮನ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವಗಳನ್ನು ನಡೆಸುವುದು ವಾಡಿಕೆ. ಹಬ್ಬದ ಅಂಗವಾಗಿ ಈ ವರ್ಷವೂ ಉತ್ಸವ ಪ್ರಾರಂಭವಾಯಿತು. ಉತ್ಸವದ ಪ್ರಮುಖ ಕಾರ್ಯಕ್ರಮವಾದ ಸೋಮವಾರ ನಡೆದ ರಥೋತ್ಸವಡಾ ವೇಳೆ ಈ ಘಟನೆ ನಡೆದಿದೆ..

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಳಿಯಮ್ಮನ ದೇವಸ್ಥಾನದ ಸುತ್ತ ಹಗ್ಗದಿಂದ ರಥವನ್ನು ಎಳೆಯುತ್ತಾರೆ. ಈ ಸಂದರ್ಭದಲ್ಲಿ ರಥ ಏಕಾಏಕಿ ಭಕ್ತರ ಮೇಲೆ ಬಿದ್ದಿದೆ. ಐವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

chariot collapses: ತಮಿಳುನಾಡಿನಲ್ಲಿ ರಥ ಅಪಘಾತ: 2 ಸಾವು, ಮೂವರಿಗೆ ಗಾಯ - Kannada News

Chariot Accident In Tamil Nadu 2 Killed Three Injured

Two men were killed and four others sustained injuries when a huge chariot of a popular temple in Papparapatti here capsized on Monday

Follow us On

FaceBook Google News