Viral Video: ಚಲಿಸುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್‌ಗೆ ಹೃದಯಾಘಾತ; ಕೇವಲ 30 ಸೆಕೆಂಡುಗಳಲ್ಲಿ ಸಾವು, ಘಟನೆ ಸಿಸಿಟಿವಿಯಲ್ಲಿ ಸೆರೆ
Viral Video: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಕಂಡಕ್ಟರ್‌ಗೆ ಹೃದಯಾಘಾತವಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Viral Video: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆ ಸೆರೆಯಾಗಿದೆ. ಖಾರ್ಗೋನ್ ಜಿಲ್ಲೆಯ ಬಾಲಕ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನ ಕಂಡಕ್ಟರ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋ ಕೇವಲ 30 ಸೆಕೆಂಡ್‌ಗಳದ್ದು, ಇದರಲ್ಲಿ ಕಂಡಕ್ಟರ್‌ಗೆ ಹೃದಯಾಘಾತ ಆಗಿರುವುದನ್ನು ನೋಡಬಹುದು, ನಂತರ ಆತ ತಾನು ಕೂತಿದ್ದ ಸೀಟಿನಲ್ಲಿಯೇ ಸಾಯುತ್ತಾನೆ.
ಪಕ್ಕದಲ್ಲಿ ಕುಳಿತಿದ್ದ ವೃದ್ಧ ದಂಪತಿಗಳು ಕಂಡಕ್ಟರ್‌ಗೆ ಹೃದಯಘಾತ ಆಗುವುದನ್ನು ಕಂಡು ಗಲಿಬಿಲಿಗೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆ ಸಂದರ್ಭದಲ್ಲಿ ಅವರು ಸಹ ಕಂಡಕ್ಟರ್‌ಗೆ ಸಹಾಯ ಮಾಡಲು ವಿಫಲರಾಗುತ್ತಾರೆ.
ಆಗ್ರಾ ಮುಂಬೈ ರಾಷ್ಟ್ರೀಯ ಹೆದ್ದಾರಿಯ ಮಗರಖೇಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೇ 20 ರಂದು ಈ ಘಟನೆ ನಡೆದಿದೆ ಎಂದು ತಿಕ್ರಿ ಠಾಣೆಯ ಪ್ರಭಾರಿ ಭವಾನಿ ರಾಮ್ ವರ್ಮಾ ತಿಳಿಸಿದ್ದಾರೆ. ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಘಟನೆಗೆ ಹೃದಯ ಸ್ತಂಭನವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಪ್ರಾಥಮಿಕವಾಗಿ ಹೃದಯ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.
#WATCH मध्य प्रदेश के खरगोन जिले में एक चलती बस में कंडक्टर को हॉर्टअटैक आने की घटना सीसीटीवी में कैद हो गई है। वीडियो महज 30 सेकंड का है जिसमें देखते ही देखते कंडक्टर की मौत हो जाती है। #ViralVideos #MadhyaPradesh pic.twitter.com/lmOxZZNS4b
— Krishna Bihari Singh (@KrishnaBihariS2) May 23, 2023
ಘಟನೆಯ ನಂತರ, ಚಾಲಕ ಬಸ್‌ನೊಂದಿಗೆ ಆಸ್ಪತ್ರೆ ತಲುಪಿದ ತಕ್ಷಣ, ಕರ್ತವ್ಯದಲ್ಲಿದ್ದ ವೈದ್ಯ ಆರ್‌ಎಸ್ ತೋಮರ್ ತನ್ನ ಸಹೋದ್ಯೋಗಿಗಳೊಂದಿಗೆ ಕಂಡಕ್ಟರ್‌ಗೆ ಪ್ರಥಮ ಚಿಕಿತ್ಸೆ ಸಿಪಿಆರ್ ನೀಡಿದರು. ಕಂಡಕ್ಟರ್ ಅಖಿಲ್ ಕುಮಾವತ್ ಅವರನ್ನು ರಕ್ಷಿಸಲು ವೈದ್ಯರು ಶತಪ್ರಯತ್ನ ಮಾಡಿದರೂ ಅವರನ್ನು ರಕ್ಷಿಸಲಾಗಲಿಲ್ಲ.
conductor died due to heart attack in bus death in just 30 seconds CCTV Video Goes Viral
Follow us On
Google News |