IIT Bombay ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ

Story Highlights

IIT Bombay: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಐಐಟಿ ಬಾಂಬೆಯಲ್ಲಿ ದುರಂತ ನಡೆದಿದೆ. ಬಿಟೆಕ್ ಫಸ್ಟಿಯರ್‌ನ 18 ವರ್ಷದ ವಿದ್ಯಾರ್ಥಿ ಭಾನುವಾರ ಮಧ್ಯಾಹ್ನ ಕ್ಯಾಂಪಸ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

IIT Bombay: ಮುಂಬೈ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಐಐಟಿ ಬಾಂಬೆಯಲ್ಲಿ ದುರಂತ ನಡೆದಿದೆ. ಬಿಟೆಕ್ ಫಸ್ಟಿಯರ್‌ನ 18 ವರ್ಷದ ವಿದ್ಯಾರ್ಥಿ ಭಾನುವಾರ ಮಧ್ಯಾಹ್ನ ಕ್ಯಾಂಪಸ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಅಹಮದಾಬಾದ್‌ನ ದರ್ಶನ್ ಸೋಲಂಕಿ ಎಂದು ಪೊಲೀಸರು ಗುರುತಿಸಿದ್ದಾರೆ. ದರ್ಶನ್ ತಮ್ಮ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಶನಿವಾರವೇ ಮುಗಿಸಿದ್ದಾರೆ. ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್, ಐಐಟಿ ಬಾಂಬೆ ದರ್ಶನ್ ಸಾವಿನ ಕುರಿತು ಟ್ವೀಟ್ ಮಾಡಿದ್ದಾರೆ. ದಲಿತ ವಿದ್ಯಾರ್ಥಿ ದರ್ಶನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದರ್ಶನ್ ಮೂರು ತಿಂಗಳ ಹಿಂದೆ ಐಐಟಿ ಬಾಂಬೆ ಸೇರಿದ್ದರು. ದರ್ಶನ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ದಲಿತ, ಬಹುಜನ ಮತ್ತು ಆದಿವಾಸಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸುರಕ್ಷಿತವಾಗಿಲ್ಲ. ಜಾತಿಯ ಹೆಸರಿನಲ್ಲಿ ಅವಮಾನಿಸಲಾಗುತ್ತಿದ್ದು, ಈ ವಿಚಾರದಲ್ಲಿ ಕೆಲ ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ತಾರತಮ್ಯ ಮಾಡುತ್ತಿದ್ದಾರೆ ಎಂದರು.

Dalit Student Suicide In iiT Bombay

Related Stories