ದೆಹಲಿಯಲ್ಲಿ ಮತ್ತೆ ಹಳೆ ಮದ್ಯ ನೀತಿ
ನವದೆಹಲಿ: ದೆಹಲಿಯ ಆಮ್ ಆದ್ಮಿ ಸರ್ಕಾರ ಮತ್ತೆ ಹಳೆಯ ಮದ್ಯ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಆಗಸ್ಟ್ 1ರಿಂದ ಈ ನೀತಿ ಜಾರಿಯಾಗಲಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯಲ್ಲಿ ಸಂಭವಿಸುವ ದುರಂತಗಳನ್ನು ದೇಶ ಸಹಿಸುವುದಿಲ್ಲ, ಹಾಗಾಗಿ ಹೊಸ ಮದ್ಯದ ವ್ಯವಸ್ಥೆಗೆ ಬದಲಾಗಿ ಹಳೆಯ ರೀತಿಯಲ್ಲಿ ಮದ್ಯ ಮಾರಾಟ ಮಾಡಲಾಗುವುದು ಎಂದು ಸಿಸೋಡಿಯಾ ಹೇಳಿದ್ದಾರೆ. ಹೊಸ ನೀತಿಯನ್ನು ಬೆಂಬಲಿಸಿದ ಸಿಸೋಡಿಯಾ, ಭ್ರಷ್ಟಾಚಾರ ತಡೆಗಟ್ಟುವ ನೀತಿಯನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.
ಅಬಕಾರಿ ನೀತಿಯ ಅವಧಿ ಮುಗಿಯುವ ಹಂತದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಗುಜರಾತ್‌ನಲ್ಲಿ ಕಲಬೆರಕೆ ಮದ್ಯ ಸೇವಿಸಿ 42 ಮಂದಿ ಸಾವನ್ನಪ್ಪಿದ್ದರು. ಆದರೆ ದೆಹಲಿಯಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ. ಕಾನೂನಾತ್ಮಕವಾಗಿ ಮದ್ಯ ಮಾರಾಟ ನಿಲ್ಲಿಸಿದರೆ ಗುಜರಾತ್‌ನಂತಹ ಘಟನೆಗಳು ನಡೆಯುತ್ತವೆ ಎಂದರು.
delhi reverts to old liquor sale policy after new rules spark row