India News

Delhi Triple Murder: ದೆಹಲಿ ತ್ರಿವಳಿ ಕೊಲೆ ರಹಸ್ಯ ಭೇದಿಸಿದ ಪೊಲೀಸರು, ಮಗನೇ ಹಂತಕ

Delhi Triple Murder: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ನಿಗೂಢತೆಯನ್ನು ಪೊಲೀಸರು ಭೇದಿಸಿದ್ದಾರೆ. (Delhi Triple Murder) ಮನೆ ಮಗನೇ ಹಂತಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಬುಧವಾರ ಬೆಳಗ್ಗೆ ದಕ್ಷಿಣ ದೆಹಲಿಯ ನೆಬ್ ಸರೈ ಪ್ರದೇಶದ ಮನೆಯೊಂದರಲ್ಲಿ 51 ವರ್ಷದ ರಾಜೇಶ್ ಕುಮಾರ್, 46 ವರ್ಷದ ಪತ್ನಿ ಕೋಮಲ್ ಮತ್ತು 23 ವರ್ಷದ ಮಗಳು ಕವಿತಾ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

Delhi Triple Murder: ದೆಹಲಿ ತ್ರಿವಳಿ ಕೊಲೆ ರಹಸ್ಯ ಭೇದಿಸಿದ ಪೊಲೀಸರು, ಮಗನೇ ಹಂತಕ

ಅವರ ಮಗ ಅರ್ಜುನ್ (20) ಪೊಲೀಸರಿಗೆ ದೂರು ನೀಡಿದ್ದು, ತಾನು ಬೆಳಗಿನ ವಾಕಿಂಗ್‌ಗೆ ಹೋಗಿ ಮನೆಗೆ ಹಿಂದಿರುಗಿದಾಗ ತನ್ನ ಅಪ್ಪ ಅಮ್ಮ ಮತ್ತು ಸಹೋದರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಏತನ್ಮಧ್ಯೆ, ತ್ರಿವಳಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅರ್ಜುನ್ ಬೆಳಗಿನ ವಾಕಿಂಗ್ ಗೆ ಹೋಗದೆ ಮನೆಯಿಂದ ಹೊರಗೆ ಬಂದು ಅಕ್ಕಪಕ್ಕದವರಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈತನ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಆತನನ್ನು ಬಂಧಿಸಲಾಗಿದೆ.

ಮತ್ತೊಂದೆಡೆ, ಅರ್ಜುನ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಅವನು ತನ್ನ ಹೆತ್ತವರು ಮತ್ತು ಸಹೋದರಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

Delhi Triple Murder Case Cracked Killer Son Arrested

Our Whatsapp Channel is Live Now 👇

Whatsapp Channel

Related Stories