ಬಾಲಕನ ಎಡ ಕಣ್ಣಿನ ಬದಲು ಬಲ ಕಣ್ಣಿಗೆ ಆಪರೇಷನ್ ಮಾಡಿದ ವೈದ್ಯರು

Story Highlights

ವೈದ್ಯರ ನಿರ್ಲಕ್ಷ್ಯದಿಂದ ಎಡಗಣ್ಣಿನ ಬದಲಿಗೆ ಬಾಲಕನ ಬಲಗಣ್ಣಿಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ, ಈ ಬಗ್ಗೆ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಲಕ್ನೋ: ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ಎಡಗಣ್ಣಿನ ಬದಲಿಗೆ ಬಾಲಕನ ಬಲಗಣ್ಣಿಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. (Doctor Operates On Wrong Eye) ಇದನ್ನು ಅರಿತ ಮಗುವಿನ ತಂದೆ-ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರ ಪರವಾನಿಗೆ ರದ್ದುಪಡಿಸಬೇಕು ಹಾಗೂ ಆಸ್ಪತ್ರೆ ಮುಚ್ಚಬೇಕು ಎಂದು ಮಗುವಿನ ಪೋಷಕರು ಒತ್ತಾಯಿಸಿದರು. ವೈದ್ಯರು ನಿರ್ಲಕ್ಷ್ಯದ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

ದೆಹಲಿಯ ಉಪನಗರ ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಏಳು ವರ್ಷದ ಬಾಲಕನ ಎಡಗಣ್ಣಿನಲ್ಲಿ ಆಗಾಗ ನೀರು ಬರುತ್ತಿತ್ತು. ಬಾಲಕನನ್ನು ಖಾಸಗಿ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನೇತ್ರ ತಜ್ಞ ಆನಂದ್ ವರ್ಮಾ ತಪಾಸಣೆ ನಡೆಸಿದರು. ಬಾಲಕನ ಎಡಗಣ್ಣಿನಲ್ಲಿ ಪ್ಲಾಸ್ಟಿಕ್‌ನಂತಹ ವಸ್ತುವಿದೆ, ಅದನ್ನು ತೆಗೆಯಬೇಕು ಎಂದು ಅವರು ಹೇಳಿದ್ದಾರೆ. ಆಪರೇಷನ್ ಮೂಲಕ ಗುಣಪಡಿಸಬಹುದು ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ 45,000 ವೆಚ್ಚವಾಗಲಿದೆ ಎಂದು ಹೇಳಿದ್ದಾರೆ

ಹೇಗೋ ತಂದೆ ತಾಯಿ ಹಣ ಕೂಡಿಟ್ಟು, ನವೆಂಬರ್ 12ರಂದು ಬಾಲಕನ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಕರೆತಂದಿದ್ದಾರೆ.

ಚಿಕಿತ್ಸೆ ಬಳಿಕ ಮನೆ ತಲುಪಿದಾಗ ಬಾಲಕನ ತಾಯಿಗೆ ಎಡಗಣ್ಣಿನ ಬದಲಿಗೆ ಬಲಗಣ್ಣಿಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ಅರಿವಾಯಿತು. ಕಣ್ಣಿನ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ವೈದ್ಯಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ. ವೈದ್ಯರ ಪರವಾನಿಗೆ ರದ್ದುಪಡಿಸಬೇಕು ಹಾಗೂ ಆಸ್ಪತ್ರೆಗೆ ಸೀಲ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Doctor Operates on the boy’s right eye instead of his left eye

Related Stories