ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆ

ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ದೇಶೀಯ ತೈಲ ಕಂಪನಿಗಳು 14.2 ಕೆಜಿ ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲು ನಿರ್ಧರಿಸಿವೆ

ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ದೇಶೀಯ ತೈಲ ಕಂಪನಿಗಳು 14.2 ಕೆಜಿ ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲು ನಿರ್ಧರಿಸಿವೆ. ಇದರಿಂದ  ದೆಹಲಿಯಲ್ಲಿ ರೂ.1003 ಇದ್ದ ಸಿಲಿಂಡರ್ ಬೆಲೆ ರೂ.1053 ತಲುಪಿದೆ. ಏರಿಕೆಯಾದ ಬೆಲೆಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಘೋಷಿಸಲಾಗಿದೆ.

ಅದೇ ರೀತಿ ಐದು ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ ರೂ.18ರಷ್ಟು ಏರಿಕೆಯಾಗಿದೆ. ಆದರೆ ಕೇಂದ್ರ ಮತ್ತೆ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ಇತ್ತೀಚೆಗೆ ಪ್ರತಿ ಸಿಲಿಂಡರ್‌ಗೆ ರೂ.8.50 ಕಡಿತಗೊಳಿಸಿದೆ. ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇದೇ 1ರಂದು ರೂ.198 ಇಳಿಕೆ ಮಾಡಿದೆ.

Domestic 14.2 kg LPG cylinder’s prices increased by Rs 50/cylinder with effect from today. Domestic LPG cylinder will now cost Rs 1053 in Delhi. 5kg domestic cylinder price increase by Rs 18/cylinder. 19kg commercial cylinder prices decreased by Rs 8.50.

Follow us On

type="adsense" data-ad-client="ca-pub-4577160196132345" data-ad-slot="7312390875" data-auto-format="rspv" data-full-width="">
FaceBook Google News