ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪ ಸಂಭವಿಸಿದೆ

ಮಧ್ಯಪ್ರದೇಶದ ಇಂದೋರ್ ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3 ಇತ್ತು. ಇಂದೋರ್‌ನಿಂದ 151 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ

ಮಧ್ಯಪ್ರದೇಶದ ಇಂದೋರ್ ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3 ಇತ್ತು. ಇಂದೋರ್‌ನಿಂದ 151 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಧಾರ್, ಬರ್ವಾನಿ ಮತ್ತು ಅಲಿರಾಜಪುರದಲ್ಲಿ ಕಂಪನಗಳು ಸಂಭವಿಸಿವೆ. ಲಘು ಭೂಕಂಪ ಆಗಿದ್ದರಿಂದ ಯಾವುದೇ ಹಾನಿಯಾಗಿಲ್ಲ. ಭೂಕಂಪನದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ್ದರಿಂದ ಮನೆಯಲ್ಲಿದ್ದವರೆಲ್ಲಾ ಗಾಬರಿಗೊಂಡು ಹೊರ ಓಡಿ ಬಂದಿದ್ದಾರೆ.

ಯಾವುದೇ ಹಾನಿಯಾಗದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಕಳೆದ ವರ್ಷ ನವೆಂಬರ್‌ನಲ್ಲಿಯೂ ಇಂದೋರ್‌ನಲ್ಲಿ ಭೂಕಂಪ ಸಂಭವಿಸಿತ್ತು. ಆ ವೇಳೆ ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿತ್ತು.

ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪ ಸಂಭವಿಸಿದೆ - Kannada News

ಈ ನಡುವೆ ಇಂದು ಮಧ್ಯಾಹ್ನ 12.12ಕ್ಕೆ ಅರುಣಾಚಲ ಪ್ರದೇಶದ ನೆಲ ಕಂಪಿಸಿದೆ. ಭೂಕಂಪವು ರಿಕ್ಟರ್ ಮಾಪಕದಲ್ಲಿ 3.8 ರಷ್ಟಿತ್ತು. ತವಾಂಗ್ ನಲ್ಲಿ ಭೂಕಂಪ ಸಂಭವಿಸಿದೆ. ಭೂತಾನ್ ಗಡಿಯಲ್ಲಿರುವ ಪಶ್ಚಿಮ ಕಮೆಂಗ್ ನಲ್ಲಿ ಹತ್ತು ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ.

earthquake hit Indore in Madhya Pradesh on Sunday

Follow us On

FaceBook Google News

Advertisement

ಮಧ್ಯಪ್ರದೇಶದ ಇಂದೋರ್ ನಲ್ಲಿ ಭೂಕಂಪ ಸಂಭವಿಸಿದೆ - Kannada News

earthquake hit Indore in Madhya Pradesh on Sunday

Read More News Today