ಹಿಮಾಚಲದಲ್ಲಿ ಸರಣಿ ಭೂಕಂಪ, ಅಲ್ಪಾವಧಿಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ
Earthquake : ಹಿಮಾಚಲ ಪ್ರದೇಶ ರಾಜ್ಯದಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಶನಿವಾರ ಬೆಳಗಿನ ಜಾವ 2:26ರ ಸುಮಾರಿಗೆ ಮಂಡಿ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ.
Earthquake : ಹಿಮಾಚಲ ಪ್ರದೇಶ ರಾಜ್ಯದಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಶನಿವಾರ ಬೆಳಗಿನ ಜಾವ 2:26ರ ಸುಮಾರಿಗೆ ಮಂಡಿ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ. ಅಲ್ಪಾವಧಿಯಲ್ಲಿ ಭೂಮಿ ಮೂರು ಬಾರಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.3 ರಷ್ಟಿತ್ತು ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ಬಹಿರಂಗಪಡಿಸಿದೆ.
ಭೂಮಿಯಿಂದ ಐದು ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಸರಣಿ ಕಂಪನದಿಂದ ಜನರು ಭಯಭೀತರಾಗಿದ್ದರು. ಅವರು ನಿದ್ರೆಯಿಂದ ಎದ್ದು ತಮ್ಮ ಮನೆಗಳಿಂದ ಆಚೆ ಓಡಿಬಂದಿದ್ದಾರೆ.
ಆದರೆ, ಕಂಪನ ಕಡಿಮೆ ಮಟ್ಟದಲ್ಲಿ ದಾಖಲಾಗಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ. ಈ ನಡುವೆ ತೆಲಂಗಾಣ ರಾಜ್ಯದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ. ಮಹೆಬೂಬ್‌ನಗರ ಜಿಲ್ಲೆಯ ಕೌಕುಂತ್‌ನಲ್ಲಿ 3.0 ತೀವ್ರತೆಯ ಭೂಕಂಪನ ದಾಖಲಾಗಿದೆ.
Earthquake In Himachal Pradesh Mandi District