Earthquake, ಮೇಘಾಲಯದಲ್ಲಿ 4.0 ತೀವ್ರತೆಯ ಲಘು ಭೂಕಂಪ

Earthquake, ಮೇಘಾಲಯದಲ್ಲಿ ಲಘು ಭೂಕಂಪ ಸಂಭವಿಸಿದೆ. ಬೆಳಗ್ಗೆ 6.32ಕ್ಕೆ ತುರಾದಲ್ಲಿ ಭೂಕಂಪ ಸಂಭವಿಸಿದೆ.

ಶಿಲ್ಲಾಂಗ್: ಮೇಘಾಲಯದಲ್ಲಿ ಲಘು ಭೂಕಂಪ ಸಂಭವಿಸಿದೆ. ಬೆಳಗ್ಗೆ 6.32ಕ್ಕೆ ತುರಾದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರವು ತುರಾದಿಂದ ದಕ್ಷಿಣಕ್ಕೆ 43 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಒಳನಾಡಿನ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅದು ಹೇಳಿದೆ.

ಟಿಬೆಟ್‌ನ ಜಿಜಾಂಗ್ ಪ್ರದೇಶದಲ್ಲೂ ಭೂಕಂಪನ ಸಂಭವಿಸಿದೆ. NCS ಪ್ರಕಾರ, 4.01 am, 4.2 ತೀವ್ರತೆಯ ಭೂಕಂಪವು ಪ್ರದೇಶವನ್ನು ನಡುಗಿಸಿತು. ಭೂಕಂಪಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಹಾನಿ ವರದಿಯಾಗಿಲ್ಲ.

Earthquake Of Magnitude 4.0 Hits Tura In Meghalaya

Related Stories