Hemant Soren ಜಾರ್ಖಂಡ್ ಸಿಎಂ ಹೇಮಂತ್ ಸೋರನ್ ಮನೆ ಮೇಲೆ ಇಡಿ ದಾಳಿ

Hemant Soren: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರನ್ (Hemant Soren) ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ (ED conducts raid). ಟೆಂಡರ್ ಹಗರಣ ಪ್ರಕರಣದಲ್ಲಿ ಸಿಎಂ ಹೇಮಂತ್ ಹಾಗೂ ಅವರ ಆಪ್ತರ ಮನೆಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಸಾಹೇಬ್‌ಗಂಜ್, ಮಿರ್ಜಾ ಚೌಕಿ, ಬರ್ಹತ್ ಮತ್ತು ರಾಜಮಹಲ್ ಸೇರಿದಂತೆ ಎಲ್ಲಾ 18 ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶೋಧ ನಡೆಸಲಾಗುತ್ತಿದೆ. ಸಿಎಂ ಸೋರನ್ ಅವರ ಪ್ರತಿನಿಧಿ ಪಂಕಜ್ ಮಿಶ್ರಾ (Pankaj Mishra) ಮನೆಗಳಲ್ಲಿ ಸಹ ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ದಾಳಿ ವೇಳೆ ಇಡಿ ಅಧಿಕಾರಿಗಳು ಅರೆಸೇನಾ ಪಡೆಗಳ ಸಹಾಯ ಪಡೆದರು.

ಸಿಎಂ ಸೋರನ್ ಮೇಲೆ ಈಗಾಗಲೇ ಗಣಿ ಹಗರಣದ ಆರೋಪವಿದೆ. ಈ ವಿಚಾರದಲ್ಲಿ ಇಡಿ ಅವರಿಗೆ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು.

Hemant Soren ಜಾರ್ಖಂಡ್ ಸಿಎಂ ಹೇಮಂತ್ ಸೋರನ್ ಮನೆ ಮೇಲೆ ಇಡಿ ದಾಳಿ - Kannada News

ED conducts raid at the locations of Jharkhand CM Hemant Soren’s MLA representative Pankaj Mishra

Follow us On

FaceBook Google News