India News

ರಿಯಲ್ ಸೈಬರ್ ಪೊಲೀಸರಿಗೆ ವಿಡಿಯೋ ಕಾಲ್ ಮಾಡಿದ ನಕಲಿ ಪೊಲೀಸ್! ಮುಂದೇನಾಯ್ತು?

ತಿರುವನಂತಪುರಂ: ನಕಲಿ ಪೊಲೀಸ್ ಒಬ್ಬ ನಿಜವಾದ ಸೈಬರ್ ಪೊಲೀಸರಿಗೆ ವಿಡಿಯೋ ಕಾಲ್ ಮಾಡಿದ್ದಾನೆ. (Fake Cop Video Calls Real Cyber Police) ಅವನು ಮಾಡಿರೋದು ನಿಜವಾದ ಪೊಲೀಸ್ ಅಧಿಕಾರಿಗೆ ಎಂದು ತಿಳಿದು ಬೆಚ್ಚಿಬಿದ್ದಿದ್ದಾನೆ.

ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಸೈಬರ್ ಭದ್ರತಾ ಪೊಲೀಸ್ ಅಧಿಕಾರಿಯೊಬ್ಬರಿಗೆ ನಕಲಿ ಪೊಲೀಸ್ ನಿಂದ ವಿಡಿಯೋ ಕರೆ ಬಂದಿದೆ. ಆತ ತಾನು ಹೈದರಾಬಾದ್ ಪೊಲೀಸ್ ಪ್ರಧಾನ ಕಚೇರಿಯಲ್ಲಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ‘ಹಲೋ, ಎಲ್ಲಿದ್ದೀಯ?’ ಎಂದು ಜೋರಾಗಿ ಪ್ರಶ್ನಿಸಿದ್ದಾನೆ

ರಿಯಲ್ ಸೈಬರ್ ಪೊಲೀಸರಿಗೆ ವಿಡಿಯೋ ಕಾಲ್ ಮಾಡಿದ ನಕಲಿ ಪೊಲೀಸ್! ಮುಂದೇನಾಯ್ತು?

ಏತನ್ಮಧ್ಯೆ, ನಕಲಿ ಪೊಲೀಸ್ ವೀಡಿಯೊ ಕರೆಯನ್ನು ಕೇರಳ ಸೈಬರ್ ಸೆಕ್ಯುರಿಟಿ ಪೊಲೀಸ್ ಅಧಿಕಾರಿ ಪತ್ತೆ ಮಾಡಿದ್ದಾರೆ. ನಗುತ್ತಾ ಅವನೊಂದಿಗೆ ಮಾತನಾಡಿದ್ದಾರೆ. ಅವರ ಕ್ಯಾಮರಾ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉತ್ತರಿಸಿದ್ದಾರೆ, ಆ ಬಳಿಕ ಮೊಬೈಲ್‌ನ ಕ್ಯಾಮೆರಾ ಆನ್ ಮಾಡಿದ್ದಾರೆ.

ಮತ್ತೊಂದೆಡೆ ನಕಲಿ ಪೊಲೀಸ್ ನಿಜವಾದ ಪೊಲೀಸರಿಗೆ ವಿಡಿಯೋ ಕಾಲ್ ಮಾಡಿದ್ದು ಗೊತ್ತಾಗಿ ಬೆಚ್ಚಿಬಿದ್ದಿದ್ದಾನೆ. ಆತನಿಗೆ ನಗುತ್ತಲೇ ಬುದ್ದಿ ಹೇಳಿದ ಪೊಲೀಸರು, ಈ ಕೆಲಸ ಬಿಟ್ಟುಬಿಡು, ನಿನ್ನ ಎಲ್ಲ ವಿವರ ನಮ್ಮ ಬಳಿ ಇದೆ ಎಂದು ಎಚ್ಚರಿಸಿದ್ದಾರೆ

ಏತನ್ಮಧ್ಯೆ, ತ್ರಿಶೂರ್ ಸಿಟಿ ಪೊಲೀಸರು ಈ ತಮಾಷೆಯ ಎಡಿಟ್ ಮಾಡಿದ ವೀಡಿಯೊ ಕ್ಲಿಪ್ ಅನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಕಲಿ ಪೊಲೀಸರಿಗೆ ಶಾಕ್ ನೀಡಿದ ಕೇರಳ ಪೊಲೀಸ್ ಅಧಿಕಾರಿಯನ್ನು ಹಲವು ನೆಟ್ಟಿಗರು ಹೊಗಳಿದ್ದಾರೆ. ಸೈಬರ್ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

Fake Cop Video Calls to Kerala Real Cyber Police Goes Viral

Our Whatsapp Channel is Live Now 👇

Whatsapp Channel

Related Stories