Crime: 12 ವರ್ಷದ ಮಗಳ ಮೇಲೆ ತಂದೆಯಿಂದಲೇ 6 ತಿಂಗಳ ನಿರಂತರ ಅತ್ಯಾಚಾರ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಮೇಲೆ ಆರು ತಿಂಗಳುಗಳಿಂದ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಶಾಲಾ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ ಬಳಿಕ ಬಹಿರಂಗವಾಗಿದೆ.

  • ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಆರೋಪ
  • ಆರು ತಿಂಗಳ ಕಾಲ ನಡೆದ ಕೃತ್ಯ ಬೆಳಕಿಗೆ
  • ಪಾಪಿ ತಂದೆ ಸೇರಿ ಆರೋಪಿಗಳ ಬಂಧನ

Maharashtra: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಮನಕಲಕುವಂತಹ ಪ್ರಕರಣ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿಯ ಮೇಲೆ ಆರು ತಿಂಗಳುಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ (Abuse of Minor Daughter) ನಡೆದಿರುವ ಆರೋಪಗಳು ತನಿಖೆಯಲ್ಲಿ ದೃಢವಾಗುತ್ತಿವೆ. ಈ ಅಮಾನುಷ ಕೃತ್ಯದಲ್ಲಿ ಬಾಲಕಿಯ ತಂದೆ, ಸಂಬಂಧಿ ಹಾಗೂ ಸಮೀಪ ವಾಸಿಸುತ್ತಿದ್ದ ವೃದ್ಧನ ಪಾತ್ರವಿದೆ ಎನ್ನಲಾಗಿದೆ.

ಈ ಘಟನೆ ಅಕೋಲಾ ಜಿಲ್ಲೆಯ ತೆಲ್ಹಾರಾ ತಾಲ್ಲೂಕು ವ್ಯಾಪ್ತಿಯ ಅಡ್ಸುಲ್ ಗ್ರಾಮದಲ್ಲಿ ನಡೆದಿದೆ. ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಂಡಿದ್ದ ಬಾಲಕಿ, ಕೊನೆಗೆ ಶಾಲೆಯ ಪ್ರಾಂಶುಪಾಲರಿಗೆ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಈ ಮಾಹಿತಿ ಪ್ರಕರಣಕ್ಕೆ ತಿರುವು ನೀಡಿದೆ.

ಇದನ್ನೂ ಓದಿ: ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ, ಡ್ಯಾಶ್‌ಕ್ಯಾಮ್‌ ತೆರೆದಿಟ್ಟ ಭೀಕರ ಸತ್ಯ

ಶಾಲೆಯಿಂದ ಪೊಲೀಸರಿಗೆ ಮಾಹಿತಿ

ಬಾಲಕಿಯ ಹೇಳಿಕೆ ಕೇಳಿದ ಶಾಲಾ ಪ್ರಾಂಶುಪಾಲರು ತಕ್ಷಣವೇ ಚೈಲ್ಡ್‌ಲೈನ್‌ ಸಹಾಯದಿಂದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.

ಪೊಲೀಸರು ಬಾಲಕಿಗೆ ಅಗತ್ಯ ವೈದ್ಯಕೀಯ ಮತ್ತು ಮಾನಸಿಕ ನೆರವು ಒದಗಿಸಿದ್ದು, ಮಕ್ಕಳ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳ ಸುರಕ್ಷತೆ ಕುರಿತು ಮತ್ತೆ ಚರ್ಚೆ ಹುಟ್ಟಿಸಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories