ದೆಹಲಿಯ ಪಹರ್‌ಗಂಜ್‌ನಲ್ಲಿರುವ ಹೋಟೆಲ್‌ ನಲ್ಲಿ ಬೆಂಕಿ ಅವಘಡ

ದೆಹಲಿಯ ಪಹರ್‌ಗಂಜ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, 10 ಜನರನ್ನು ರಕ್ಷಿಸಲಾಗಿದೆ

Bengaluru, Karnataka, India
Edited By: Satish Raj Goravigere

ನವದೆಹಲಿ: ರಾಜಧಾನಿ ದೆಹಲಿಯಿಂದ ಬರುತ್ತಿರುವ ದೊಡ್ಡ ಸುದ್ದಿಯ ಪ್ರಕಾರ, ಇಲ್ಲಿನ ಪಹರ್‌ಗಂಜ್‌ನಲ್ಲಿರುವ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಇಂದು ಅಂದರೆ ಗುರುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ.

ಈ ಬಗ್ಗೆ ದೆಹಲಿ ಅಗ್ನಿಶಾಮಕ ದಳವು ಬೆಂಕಿಯ ಸಮಯದಲ್ಲಿ ಎರಡು ಮತ್ತು ಮೂರನೇ ಮಹಡಿಯಲ್ಲಿ ಒಟ್ಟು 10 ಜನರು ಸಿಲುಕಿದ್ದು, ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಬೆಂಕಿ ಅನಾಹುತಕ್ಕೆ ಕಾರಣ ತನಿಖೆ ನಡೆಸಲಾಗುತ್ತಿದೆ. ಘಟನೆಯ ವಿವರ ಇನ್ನಷ್ಟೇ ಬರಬೇಕಿದೆ.

ದೆಹಲಿಯ ಪಹರ್‌ಗಂಜ್‌ನಲ್ಲಿರುವ ಹೋಟೆಲ್‌ ನಲ್ಲಿ ಬೆಂಕಿ ಅವಘಡ

ಬಂದಿರುವ ಮಾಹಿತಿಯ ಪ್ರಕಾರ, ಪಹರ್‌ಗಂಜ್‌ನ ರೋಮಾ ಡಿಲಕ್ಸ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಬೆಳಗಿನ ಜಾವ 4.24 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅದೇ ಸಮಯದಲ್ಲಿ, ಹೋಟೆಲ್‌ನ ಎರಡು ಮತ್ತು ಮೂರನೇ ಮಹಡಿಯಿಂದ ಇದುವರೆಗೆ 10 ಜನರನ್ನು ರಕ್ಷಿಸಲಾಗಿದೆ.

Fire broke out at Roma Delux Hotel in Paharganj Delhi

ಇದನ್ನೂ ಓದಿ : WhatsApp ವಾಯ್ಸ್ ನೋಟ್ಸ್ ಸ್ಟೇಟಸ್ ಹೊಸ ಫೀಚರ್