ಗುಜರಾತ್ ನಲ್ಲಿ ನೋಟುಗಳ ಮಳೆ, ಮದುವೆ ಸಮಾರಂಭದಲ್ಲಿ ನೋಟುಗಳನ್ನು ಸುರಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ
ಗುಜರಾತ್‌ನ ಹಳ್ಳಿಯೊಂದರಲ್ಲಿ ನೋಟುಗಳ ಮಳೆ ಸುರಿದಿದೆ. ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತಮ್ಮ ಸೋದರಳಿಯನ ಮದುವೆಯ ಸಂದರ್ಭದಲ್ಲಿ ನೋಟುಗಳನ್ನು ವಿತರಿಸಿದರು ಮತ್ತು ಅವುಗಳನ್ನು ಸಂಗ್ರಹಿಸಲು ಹೆಚ್ಚಿನ ಜನರು ಜಮಾಯಿಸಿದ್ದರು.
ಮೆಹ್ಸಾನಾ (ಗುಜರಾತ್): ಗುಜರಾತ್‌ನ ಹಳ್ಳಿಯೊಂದರಲ್ಲಿ ನೋಟಿನ ಮಳೆ ಸುರಿದಿದೆ. ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತಮ್ಮ ಸೋದರಳಿಯನ ಮದುವೆಯ ಸಂದರ್ಭದಲ್ಲಿ ಕರೆನ್ಸಿ ನೋಟುಗಳನ್ನು ವಿತರಿಸಿದರು ಮತ್ತು ಅವುಗಳನ್ನು ಸಂಗ್ರಹಿಸಲು ಹೆಚ್ಚಿನ ಜನರು ಜಮಾಯಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಹ್ಸಾನಾ ಜಿಲ್ಲೆಯ ಹಳ್ಳಿಯೊಂದರಲ್ಲಿ, ಮಾಜಿ ಸರಪಂಚ್ ಕರೀಂ ಯಾದವ್ ತನ್ನ ಸೋದರಳಿಯ ರಜಾಕ್ ಅವರ ಮದುವೆಯ ಸಂದರ್ಭದಲ್ಲಿ ಮಹಡಿಯಿಂದ ಕುಟುಂಬ ಸದಸ್ಯರೊಂದಿಗೆ ನೋಟುಗಳನ್ನು ವಿತರಿಸಿದರು.
100 ಮತ್ತು 500 ನೋಟುಗಳನ್ನು ಎಸೆದು ವಿಜೃಂಭಿಸಿದರು, ಜನರು ಅವುಗಳನ್ನು ಸಂಗ್ರಹಿಸಲು ಪೈಪೋಟಿ ನಡೆಸಿದರು. ಕೆಲಕಾಲ ಸ್ಥಳದಲ್ಲಿ ಹೆಚ್ಚಿನ ಜನರ ನೂಕುನುಗ್ಗಲು ಸಂಭವಿಸಿತು.
ಮದುವೆ ಸಂಭ್ರಮವನ್ನು ಈ ರೀತಿ ಆಚರಿಸಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯನ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು, ಆದರೆ ಅದೇನೇ ಆಗಲಿ ಜಮಾಯಿಸಿದ್ದ ಜನರು ಸಿಕ್ಕ ಸಿಕ್ಕಷ್ಟು ಹಣ ಬಾಚಿಕೊಂಡರು. ಸದ್ಯ ಈ ಸಂಬಂಧ ಫೋಟೋಗಳು ಹಾಗೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Former Sarpanch Who Scattered Notes At His Nephews Wedding Ceremony
Follow us On
Google News |
Advertisement