ಮಲಗಿದ್ದ ವೇಳೆ ಇಟ್ಟಿಗೆ ಗೂಡಿನ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವು
ಮಲಗಿದ್ದ ಮಕ್ಕಳ ಮೇಲೆ ಇಟ್ಟಿಗೆ ಗೂಡು ಗೋಡೆ ಬಿದ್ದಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
- ಹರಿಯಾಣದಲ್ಲಿ ಇಟ್ಟಿಗೆ ಗೂಡು ಗೋಡೆ ಕುಸಿದು 4 ಮಕ್ಕಳು ಸಾವು.
- ಮಲಗಿದ್ದ ವೇಳೆ ಆಕಸ್ಮಿಕವಾಗಿ ಇಟ್ಟಿಗೆ ಗೂಡಿನ ಗೋಡೆ ಕುಸಿದಿದೆ.
- ಈ ಪ್ರಕರಣದಲ್ಲಿ ಕುಟುಂಬದವರು ಇನ್ನೂ ದೂರು ದಾಖಲಿಸಿಲ್ಲ.
ಚಂಡೀಗಢ (Chandigarh): ಮಲಗಿದ್ದ ಮಕ್ಕಳ ಮೇಲೆ ಇಟ್ಟಿಗೆ ಗೂಡು ಗೋಡೆ ಕುಸಿದು (Brick Kiln Wall Collapses) ಬಿದ್ದಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಾರ್ಮಿಕರು ಬುಡಾನಾ ಗ್ರಾಮದ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಮಕ್ಕಳೊಂದಿಗೆ ಅಲ್ಲಿಯೇ ಮಲಗಿದ್ದರು. ಆದರೆ ಇಟ್ಟಿಗೆ ಗೂಡಿನ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.
ಹಾಸಿಗೆ ಹಿಡಿದ ತಾಯಿಯನ್ನು ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೋದ ಮಗ, ಹಸಿವಿನಿಂದ ಸಾವು
ಅಷ್ಟರಲ್ಲಿ ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಮೃತರನ್ನು ಮೂರು ತಿಂಗಳ ನಿಶಾ, ಐದು ವರ್ಷದ ನಂದಿನಿ, ಒಂಬತ್ತು ವರ್ಷದ ಸೂರಜ್ ಮತ್ತು ವಿವೇಕ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಐದು ವರ್ಷದ ಗೌರಿ ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಆಕೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಐವರು ಮಕ್ಕಳು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಬಡವ್ ಗ್ರಾಮದವರು ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.
Four Children Killed as Brick Kiln Wall Collapses While They Were Sleeping