India News

Tamil Nadu Crane Collapsed: ತಮಿಳುನಾಡು ದೇವಸ್ಥಾನ ಉತ್ಸವದಲ್ಲಿ ದುರಂತ.. ಕ್ರೇನ್ ಕುಸಿದು ನಾಲ್ವರ ಸಾವು

Tamil Nadu Crane Collapsed: ತಮಿಳುನಾಡು ದೇವಸ್ಥಾನ ಉತ್ಸವದಲ್ಲಿ ಕ್ರೇನ್ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಹೌದು, ತಮಿಳುನಾಡಿನಲ್ಲಿ ಭೀಕರ ಅವಘಡ ಸಂಭವಿಸಿದೆ. ಅರಕ್ಕೋಣಂನ ಕಿಲ್ವೀಡಿ ಗ್ರಾಮದಲ್ಲಿ ಆಯೋಜಿಸಿದ್ದ ದೇವಸ್ಥಾನದ ಉತ್ಸವದಲ್ಲಿ ಈ ಧಾರುಣ ಘಟನೆ ನಡೆದಿದೆ.. ಕ್ರೇನ್‌ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಇತರ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಮಿಳುನಾಡಿನಲ್ಲಿ ಪೊಂಗಲ್ ನಂತರ ಪ್ರತಿ ವರ್ಷ ದೇವಸ್ಥಾನದ ಉತ್ಸವ (Tamil Nadu Temple) ನಡೆಯುತ್ತದೆ. ಈ ಹಬ್ಬದ ಅಂಗವಾಗಿ ಭಕ್ತರು ಕ್ರೇನ್‌ ನಲ್ಲಿ ನೇತಾಡುತ್ತಾರೆ ಮತ್ತು ದೇವರ ಪ್ರತಿಮೆಗೆ ಮಾಲೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾಣಿಪೇಟೆಯ ಅರಕ್ಕೋಣಂ ಸಮೀಪದ ಕಿಲ್ವೀಡಿ ಗ್ರಾಮದಲ್ಲಿ ದ್ರೌಪತಿ ದೇವಿ ಉತ್ಸವಗಳು ನಡೆದವು. ಇದರ ಅಂಗವಾಗಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಬೀದಿಗಳಲ್ಲಿ ದೇವರ ವಿಗ್ರಹವನ್ನು ಸಾಗಿಸಲು ಬೃಹತ್ ಕ್ರೇನ್ ಬಳಸಲಾಯಿತು.

Four Dead Nine Injured After Crane Collapsed At Tamil Nadu Temple Festival

ಕ್ರೇನ್ ಕುಸಿದು ನಾಲ್ವರು ಭಕ್ತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ (Crane Collapsed in Temple Utsava). ಈ ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಉತ್ಸವದಲ್ಲಿ ಕ್ರೇನ್ ಬಳಸಲು ಅನುಮತಿ ಇಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.

Four Dead Nine Injured After Crane Collapsed At Tamil Nadu Temple Festival

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ