Live News National: ಹಳಿ ತಪ್ಪಿದ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲಿನ 20 ಬೋಗಿಗಳು

Story Highlights

Live News Update: ಛತ್ತೀಸ್‌ಗಢದ ಬಿಲಾಸ್‌ಪುರ ರೈಲ್ವೆ ವಿಭಾಗದಲ್ಲಿ ಕಲ್ಲಿದ್ದಲು ತುಂಬಿದ್ದ ಸರಕು ಸಾಗಣೆ ರೈಲು ಹಳಿತಪ್ಪಿದೆ.

Live News Update: ಛತ್ತೀಸ್‌ಗಢದ ಬಿಲಾಸ್‌ಪುರ ರೈಲ್ವೆ ವಿಭಾಗದಲ್ಲಿ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು (Rail) ಹಳಿತಪ್ಪಿದೆ. ಮಂಗಳವಾರ ಬೆಳಗ್ಗೆ 11.11ಕ್ಕೆ ಈ ಘಟನೆ ನಡೆದಿದೆ. ಇದರಿಂದ ಆ ಮಾರ್ಗದ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು ಹೊತ್ತ ಗೂಡ್ಸ್ ರೈಲು ಬಿಲಾಸ್‌ಪುರದಿಂದ ಕಟ್ನಿಗೆ ಹೋಗುತ್ತಿತ್ತು, ಈ ವೇಳೆ ಹಳಿತಪ್ಪಿತು. ರೈಲಿನ 20 ಬೋಗಿಗಳು ಏಕಕಾಲಕ್ಕೆ ಹಳಿತಪ್ಪಿದವು. ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಳಿಯನ್ನು ತೆರವುಗೊಳಿಸಿ ರೈಲುಗಳ ಸಂಚಾರವನ್ನು ಪುನಃಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ.

ತನಿಖೆಯ ನಂತರ ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹೀತಿ ಸಹ ಅಧಿಕಾರಿಗಳು ಕೊಟ್ಟಿದ್ದಾರೆ. ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಪ್ಯಾಸೆಂಜರ್ ರೈಲುಗಳ ಸಂಚಾರವು ಆ ಮಾರ್ಗದಲ್ಲಿ ಓಡುವುದು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಆಯಾ ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ…

  • ಎಪಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ರಾಜ್ಯಸಭಾ ಉಪಚುನಾವಣೆಗೆ ವೇಳಾಪಟ್ಟಿ ಬಿಡುಗಡೆ
  • ಪ್ರಧಾನಿ ಮೋದಿ ಅವರು ಸಂವಿಧಾನ ಓದಿಲ್ಲ: ರಾಹುಲ್ ಗಾಂಧಿ
  • ವಾಟ್ಸಾಪ್, ಜಿಮೇಲ್ ಬಳಕೆಗೆ ಸರ್ಕಾರ ನಿಷೇಧ! ಅಸಲಿ ಕಾರಣ ಏನು..?
Related Stories