ಫ್ರೀ ಇಂಟರ್ನೆಟ್ ಇದೆ ಎಂದು ಯಾವ್ಯಾವುದೋ ವಿಷಯ ಗೂಗಲ್ ಸರ್ಚ್ ಮಾಡಿದರೆ, ಜೈಲು ಸೇರಬೇಕಾಗುತ್ತದೆ..
ಗೂಗಲ್ ರೀಸ್ಟ್ರಿಕ್ಟ್ ಮಾಡಿರುವ ಕೆಲವು ವಿಚಾರಗಳನ್ನು ನೀವು ಗೂಗಲ್ ಸರ್ಚ್ ಮಾಡಿದರೆ, ಖಂಡಿತವಾಗಿಯೂ ಜೈಲು ಪಾಲಾಗುತ್ತೀರಿ.
ಈಗ ಎಲ್ಲರ ಬಳಿ ಸ್ಮಾರ್ಟ್ ಫೋನ್ (Smartphone) ಇದ್ದೇ ಇರುತ್ತದೆ, ಫೋನ್ ಹಾಗೂ ಇಂಟರ್ನೆಟ್ ಇರುವವರು ಅನೇಕ ಕಾರಣಗಳಿಗೆ ಗೂಗಲ್ (Google) ಬಳಸುತ್ತಾರೆ. ಒಂದು ರೀತಿ ಈಗ ಗೂಗಲ್ ಎಲ್ಲರ ಟೀಚರ್ ಆಗಿದೆ ಎಂದೇ ಹೇಳಬಹುದು, ಓದುವ ವಿಚಾರದಿಂದ ಹಿಡಿದು, ಅಡುಗೆ ಮಾಡುವುದು, ಆರೋಗ್ಯ, ಲೈಫ್ ಸ್ಟೈಲ್ ಸೇರಿದಂತೆ ವಿಶ್ವದಲ್ಲಿರುವ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಗೂಗಲ್ ನಲ್ಲಿ ಸಿಗುತ್ತದೆ.
ಯಾವುದಾದರು ಪದ ಗೊತ್ತಿಲ್ಲದೆ ಇದ್ದರೆ, ಅದರ ಅರ್ಥವನ್ನು ಕೂಡ ಗೂಗಲ್ ಇಂದ ಪಡೆಯಬಹುದು. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳು, ಹೊಸ ಕೆಲಸ ಹುಡುಕುವುದು ಇದೆಲ್ಲವೂ ಕೂಡ ಗೂಗಲ್ ಇಂದ ಸಾಧ್ಯ. ಮೊಬೈಲ್ ಅಥವಾ ಕಂಪ್ಯುಟರ್ ಬಳಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ದಿನಕ್ಕೆ ಒಂದಷ್ಟು ಸಾರಿ ಗೂಗಲ್ ಮೂಲಕ ಏನನ್ನಾದರೂ ಸರ್ಚ್ (Google Search) ಮಾಡೋದು ಗ್ಯಾರಂಟಿ.
ಪ್ರಪಂಚದಲ್ಲಿರುವ ಎಲ್ಲಾ ವಿಷಯಗಳ ಬಗ್ಗೆ ನಿಮಗೆ ಮಾಹಿತಿ ಸಿಗೋದು ಖಂಡಿತ, ಆದರೆ ಗೂಗಲ್ ಸರ್ಚ್ ಗೆ ಕೂಡ ಕೆಲವು ಲಿಮಿಟ್ಸ್ (Google Search Limits) ಇದೆ ಎನ್ನುವ ವಿಚಾರ ನಿಮಗೆ ಗೊತ್ತಾ? ಹೌದು ಸ್ನೇಹಿತರೇ, ಗೂಗಲ್ ಕೂಡ ಗೂಗಲ್ ಸರ್ಚ್ ಮಾಡುವುದಕ್ಕೆ ಕೆಲವು ನಿಯಮಗಳು (Google Rules), ಕಟ್ಟುಪಾಡುಗಳನ್ನು ಹೊಂದಿದೆ. ಕೆಲವು ವಿಚಾರಗಳ ಬಗ್ಗೆ ನೀವು ಗೂಗಲ್ ಸರ್ಚ್ ಮಾಡುವ ಹಾಗಿಲ್ಲ.
ಈ ರೀತಿ ಗೂಗಲ್ ರಿಸ್ಟ್ರಿಕ್ಷನ್ಸ್ (Google Restrictions) ಮಾಡಿರುವ ಕೆಲವು ವಿಚಾರಗಳನ್ನು ನೀವು ಗೂಗಲ್ ಸರ್ಚ್ ಮಾಡಿದರೆ, ಏನಾಗುತ್ತೆ ಗೊತ್ತಾ? ಆ ವಿಚಾರಗಳ ಬಗ್ಗೆ ನೀವು ಗೂಗಲ್ ಮಾಡಿದರೆ, ನೀವು ಖಂಡಿತವಾಗಿಯೂ ಜೈಲು ಪಾಲಾಗುತ್ತೀರಿ. ಗೂಗಲ್ ಎನ್ನುವ ಈ ವೆಬ್ಸೈಟ್ ನಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಸಿಗುತ್ತದೆ, ಮಕ್ಕಳಿಂದ ಹಿಡಿದು, ದೊಡ್ಡವರವರೆಗು ಎಲ್ಲರೂ ಸಹ ಗೂಗಲ್ ಬಳಸುತ್ತಾರೆ.
ಹಾಗಾಗಿ ಗೂಗಲ್ ಕೆಲವು ವಿಚಾರಗಳಿಗೆ ಮಿತಿ ಇಟ್ಟಿದೆ. ಹಾಗಿದ್ದಲ್ಲಿ ನೀವು ಗೂಗಲ್ ಸರ್ಚ್ ಮಾಡಬಹುದಾದ ವಿಷಯಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. *ಗೂಗಲ್ ಲಿಮಿಟ್ಸ್ ಹಾಕಿರುವ ಮುಖ್ಯ ವಿಚಾರ, ಸಣ್ಣ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು. ಇದರ ಬಗ್ಗೆ ನೀವು ಗೂಗಲ್ ಸರ್ಚ್ ಮಾಡಿದರೆ, ನಿಮ್ಮನ್ನು ಜೈಲಿಗೆ ಹಾಕೋದು ಗ್ಯಾರಂಟಿ.
*ಕೆಲವು ಜನರು ಸಿನಿಮಾಗಳ ಪೈರೆಸಿ ವೀಕ್ಷಣೆ ಮಾಡುವುದಕ್ಕಾಗಿ ಅದರ ಬಗ್ಗೆ ಗೂಗಲ್ ಸರ್ಚ್ ಮಾಡುತ್ತಾರೆ. ಇದನ್ನು ಕೂಡ ಗೂಗಲ್ ನಿಷೇಧಿಸಿದೆ.. ಪೈರೆಸಿ ಸಿನಿಮಾಗಳ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುಗ ಹಾಗಿಲ್ಲ. *ಹಾಗೆಯೇ ನಿಮ್ಮ ತಾಯ್ನಾಡಿಗೆ ದೇಶಕ್ಕೆ ದ್ರೋಹ ಮಾಡುವಂಥ ವಿಚಾರಗಳನ್ನು ಗೂಗಲ್ ಸರ್ಚ್ ಮಾಡುವ ಹಾಗಿಲ್ಲ.
ಉದಾಹರಣೆಗೆ, ಸ್ಫೋಟಕಗಳ ತಯಾರಿಕೆ, ಇಂಥ ವಿಚಾರಗಳ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ ಜೈಲು ಸೇರಬೇಕಾಗುತ್ತದೆ. ಇನ್ನುಮುಂದೆ ಈ ಎಲ್ಲಾ ನಿಯಮಗಳು ನಿರ್ಬಂಧನೆಗಳನ್ನು ಅರ್ಥ ಮಾಡಿಕೊಂಡು ಗೂಗಲ್ ಸರ್ಚ್ ಬಳಸಿ.
Google search new rules