ಕೋವಿಡ್-19 ಬೂಸ್ಟರ್ ಡೋಸ್ ಕುರಿತು ನಿರ್ಣಾಯಕ ನಿರ್ಧಾರ!

ನವದೆಹಲಿ: ನಾಲ್ಕನೇ ಅಲೆಯ ಕೊರೊನಾ ಭೀತಿ (Corona 4th Wave) ಎದುರಾಗಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ (Covid booster dose) ನಡುವಿನ ಅಂತರವನ್ನು ಆರು ತಿಂಗಳಿಗೆ ಕಡಿಮೆ ಮಾಡಲಾಗಿದೆ.
ಚುಚ್ಚುಮದ್ದಿನ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ), ವ್ಯಾಕ್ಸಿನೇಷನ್‌ನ ಸಲಹಾ ಮಂಡಳಿಯು ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಮಧ್ಯಂತರವನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದೆ.
ಈ ಹಿಂದೆ ಕರೋನಾ ಲಸಿಕೆಯ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವೆ ಒಂಬತ್ತು ತಿಂಗಳ ಅಂತರವಿತ್ತು. ಇದನ್ನು ಈಗ ಆರು ತಿಂಗಳು ಅಥವಾ 26 ವಾರಗಳಿಗೆ ಇಳಿಸಲಾಗಿದೆ. 18 ರಿಂದ 59 ವರ್ಷ ವಯಸ್ಸಿನವರು ಎರಡನೇ ಡೋಸ್ ನೀಡಿದ ಆರು ತಿಂಗಳು ಅಥವಾ 26 ವಾರಗಳ ನಂತರ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದೆ.
Govt reduces gap for Covid booster dose to 6 months



