ಘೋರ ದುರಂತ: ಟ್ರಕ್ ಪಲ್ಟಿಯಾಗಿ ಮೂವರು ಮಹಿಳೆಯರು, ಒಂದು ಮಗು ದುರ್ಮರಣ
ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಕಾರ್ಮಿಕರ ಗುಂಪಿನ ಮೇಲೆ ಮರಳು ಸಾಗಿಸುತ್ತಿದ್ದ ಡಂಪರ್ ಟ್ರಕ್ ಉರುಳಿ, ಮೂವರು ಮಹಿಳೆಯರು ಮತ್ತು ಒಂದು ಮಗು ದಾರುಣವಾಗಿ ಮೃತಪಟ್ಟಿದ್ದಾರೆ.
- ಡಂಪರ್ ಟ್ರಕ್ ಪಲ್ಟಿಯಾಗಿ ಮೂವರು ಮಹಿಳಾ ಕಾರ್ಮಿಕರು, ಒಂದು ಮಗು ದುರ್ಮರಣ
- ಕ್ರೇನ್, ಬುಲ್ಡೋಜರ್ ಬಳಸಿ ಮೂರು ಗಂಟೆಗಳ ರಕ್ಷಣಾ ಕಾರ್ಯಾಚರಣೆ
- ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಕಾರ್ಮಿಕರು
Gujarat Tragedy: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಕೆಂಗಾರ್‌ಪುರ್ ಗ್ರಾಮದಲ್ಲಿ ಶನಿವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಮರಳು ತುಂಬಿದ ಡಂಪರ್ ಟ್ರಕ್ ಪಲ್ಟಿಯಾಗಿದ್ದು, ಮೂವರು ಮಹಿಳಾ ಕಾರ್ಮಿಕರು ಹಾಗೂ ಒಂದು ಮಗು ದುರ್ಮರಣಕ್ಕೀಡಾಗಿದ್ದಾರೆ.
ಘಟನೆಯ ವಿವರ:
ರಸ್ತೆ ಕಾಮಗಾರಿಯು ನಡೆಯುತ್ತಿದ್ದಾಗ, ಡಂಪರ್ ಟ್ರಕ್ ಚಾಲಕ ವಾಹನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ, ಭಾರೀ ಟ್ರಕ್ ನೇರವಾಗಿ ಮಹಿಳಾ ಕಾರ್ಮಿಕರ ಗುಂಪಿನ ಮೇಲೆ ಉರುಳಿದೆ. ಸ್ಥಳೀಯರು ತಕ್ಷಣ ಪೊಲೀಸರು ಮತ್ತು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಟ್ರಕ್‌ನಡಿ ಸಿಲುಕಿದವರನ್ನು ಹೊರತೆಗೆಯಲು ಮೂರು ಗಂಟೆಗಳ ಕಾಲ ಶ್ರಮಿಸಬೇಕಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಕ್ರೇನ್ ಮತ್ತು ಬುಲ್ಡೋಜರ್ ಬಳಸಿ, ಸಿಲುಕಿದವರನ್ನು ಹೊರತೆಗೆಯಲಾಯಿತು. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಷ್ಟರಲ್ಲೇ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದರು.
ಆಸ್ಪತ್ರೆಯ ವೈದ್ಯರ ಮಾಹಿತಿ:
ಥರಾಡ್ ಸರ್ಕಾರಿ ಆಸ್ಪತ್ರೆಯ ವೈದ್ಯ ಜೈದೀಪ್ ತ್ರಿವೇದಿ ಮಾತನಾಡಿ, “ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಾಲ್ವರೂ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿದ್ದರು” ಎಂದು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಯ ತನಿಖೆ ಮುಂದುವರೆದಿದೆ.
Gujarat Tragedy: Truck Overturns, Kills 3 Women and Child
Our Whatsapp Channel is Live Now 👇