ಯುವಕರಿಂದ ಕಿರುಕುಳ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಡಿಗೆ ಬಿದ್ದು ವಿದ್ಯಾರ್ಥಿನಿ ಸಾವು
12ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಮೂವರು ಯುವಕರು ಕಿರುಕುಳ ನೀಡಿದ ನಂತರ ಆಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೆಳಗೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ.
- ರೈಲು ಹಳಿ ಮೇಲೆ ಹಾರಿ ಬಾಲಕಿಯ ಆತ್ಮಹತ್ಯೆ
- ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿದ ಆರೋಪ
- ಒಬ್ಬ ಆರೋಪಿ ಬಂಧನ, ಮತ್ತಿಬ್ಬರಿಗಾಗಿ ಶೋಧ
ಹರಿಯಾಣದ ಗನ್ನೌರ್ (Ganaur) ರೈಲು ಹಳಿ ಮೇಲೆ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬುಧವಾರ ನಡೆದ ಈ ದುರ್ಘಟನೆಯಲ್ಲಿ ಬಾಲಕಿಯು ವಂದೇ ಭಾರತ್ (Vande Bharat) ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಕುಟುಂಬದವರು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಮೂವರು ಯುವಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ತುಷಾರ್, ಕಮಲ್ ಮತ್ತು ಮಂಜೀತ್ ಎಂಬ ಮೂವರು ಯುವಕರು ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ತಂದೆ ದೂರು ನೀಡಿದ್ದಾರೆ.
ಘಟನೆಯ ನಂತರ ಬಾಲಕಿಯ ಶವವನ್ನು ಖಾನ್‌ಪುರ್ ಕಲಾನ್‌ನ ಭಗತ್ ಸಿಂಗ್ ಮೆಡಿಕಲ್ ಕಾಲೇಜಿಗೆ ಪೋಸ್ಟ್‌ಮಾರ್ಟಂಗೆ ಸಾಗಿಸಲಾಗಿದೆ. ಒಬ್ಬ ಆರೋಪಿ ಈಗಾಗಲೇ ಬಂಧನದಲ್ಲಿದ್ದು, ಇತರಿಬ್ಬರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ, ವಿದ್ಯಾರ್ಥಿನಿಯ ವಯಸ್ಸು 18 ವರ್ಷವಾಗಿರುವ ಕಾರಣ (ಆಧಾರ್ ಕಾರ್ಡ್ ಪ್ರಕಾರ), ಪೋಕ್ಸೋ (POCSO) ಕಾಯ್ದೆಯು ಅನ್ವಯವಾಗದಿರಬಹುದು ಎಂಬ ಅಭಿಪ್ರಾಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Haryana Student Suicide, Three Accused of Harassment
Our Whatsapp Channel is Live Now 👇