ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಬಸ್ ನಿಯಂತ್ರಿಸಿ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಬಾಲಕಿ

ಶಾಲಾ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಚಾಲಕನಿಗೆ ಏಕಾಏಕಿ ಹೃದಯಾಘಾತ ಉಂಟಾಗಿ ಸ್ಟೇರಿಂಗ್ ಕೈ ಬಿಟ್ಟು ಪಕ್ಕಕ್ಕೆ ಬಿದ್ದಿದ್ದಾನೆ. ಇದರ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಗುದ್ದಿದೆ

ಗುಜರಾತ್ (Gujarat): ಗುಜರಾತ್ ನ ರಾಜ್ ಕೋಟ್ ನಲ್ಲಿ ಬಾಲಕಿಯೊಬ್ಬಳ ಸಾಹಸ ಹಲವು ವಿದ್ಯಾರ್ಥಿಗಳ ಪ್ರಾಣ ಉಳಿಸಿದೆ. ಶಾಲಾ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ (School Bus) ಕರೆದೊಯ್ಯುತ್ತಿದ್ದಾಗ ಚಾಲಕನಿಗೆ ಏಕಾಏಕಿ ಹೃದಯಾಘಾತ (Hear Attack to Driver) ಉಂಟಾಗಿ ಸ್ಟೇರಿಂಗ್ ಕೈ ಬಿಟ್ಟು ಪಕ್ಕಕ್ಕೆ ಬಿದ್ದಿದ್ದಾನೆ. ಇದರ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಗುದ್ದಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬಳು (Student) ಕೂಡಲೇ ಬಸ್ ಅನ್ನು ನಿಯಂತ್ರಿಸಿದ್ದಾಳೆ. ಇದರಿಂದ ಬಸ್ಸಿನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Live Updates: ಇಂದು ಪ್ರಧಾನಿ ಮೋದಿ ಕರ್ನಾಟಕ ಭೇಟಿ; ತುಮಕೂರು HAL ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟನೆ

ರಾಜ್‌ಕೋಟ್‌ನ ಭಾರದ್ ಶಾಲೆಗೆ ಸೇರಿದ ಬಸ್ಸೊಂದು ವಿದ್ಯಾರ್ಥಿಗಳನ್ನು ಅವರವರ ಸ್ಥಳಗಳಿಗೆ ಕರೆದೊಯ್ಯಲು ಶನಿವಾರ (ಫೆಬ್ರವರಿ 4, 2023) ಸಂಜೆ ಶಾಲೆಯಿಂದ ಹೊರಟಿದೆ. ಬಸ್ ಗೊಂಡಲ್ ರಸ್ತೆಗೆ ಬಂದಾಗ ಚಾಲಕನಿಗೆ ಹೃದಯಾಘಾತವಾಗಿತ್ತು. ನೋವು ತಾಳಲಾರದೆ ಕೆಳಗೆ ಬಿದ್ದಿದ್ದಾನೆ. ಬಸ್ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಮುಂದೆ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಬಸ್ ನಿಯಂತ್ರಿಸಿ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಬಾಲಕಿ - Kannada News

ಚಾಲಕನ ಸೀಟಿನ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಭಾರ್ಗವಿ ಕೂಡಲೇ ಸ್ಟೇರಿಂಗ್ ಹಿಡಿದು ಬಸ್ ಅನ್ನು ನಿಯಂತ್ರಿಸಿದರು. ಇದರಿಂದ ಭಾರೀ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ಹರುಣ್‌ಭಾಯ್ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರ್ಗವಿ ಚಾಲಕನ ಜೊತೆ ಸೇರಿ ಹಲವು ವಿದ್ಯಾರ್ಥಿಗಳ ಪ್ರಾಣ ಉಳಿಸಿದ್ದಾಳೆ.

Heart Attack To School Bus Driver In Running Bus Girl Student Save Life By Steering Control In Gujarat

Follow us On

FaceBook Google News

Advertisement

ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಬಸ್ ನಿಯಂತ್ರಿಸಿ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಬಾಲಕಿ - Kannada News

Heart Attack To School Bus Driver In Running Bus Girl Student Save Life By Steering Control In Gujarat - Kannada News Today

Read More News Today