ನೋಟಿನ ಮೇಲೆ ಗಾಂಧೀಜಿ ಅವರ ಫೋಟೋ ಯಾವಾಗ ಬಂತು? ಅದರ ಹಿಂದಿನ ಕಥೆ ಏನು?
- ಭಾರತದ ಕರೆನ್ಸಿ ನೋಟುಗಳ ಇತಿಹಾಸ ಇಲ್ಲಿದೆ.
- ನೋಟಿನ ಮೇಲೆ ಗಾಂಧೀಜಿ ಫೋಟೋ ಬಂದಿದ್ದು ಯಾವಾಗ?
- ಗಾಂಧಿಗಿಂತ ಮುಂಚೆ ಭಾರತದ ಕರೆನ್ಸಿ ನೋಟಿನಲ್ಲಿ ಇದ್ದಿದ್ದು ಯಾರು.
History of Indian Currency Notes: ಇವತ್ತು ಭಾರತದಲ್ಲಿ ಕರೆನ್ಸಿ ನೋಟುಗಳನ್ನು ಪ್ರತಿಯೊಬ್ಬರು ಕೂಡ ಬಳಕೆ ಮಾಡುತ್ತಿದ್ದೀರಿ ಹಾಗೂ ಅವುಗಳ ಪರಿಚಯ ನಿಮಗೆ ಹುಟ್ಟಿದಾಗಿನಿಂದಲೂ ಕೂಡ ಇದೆ. ಆದರೆ ಆರಂಭದಿಂದಲೂ ಕೂಡ ಈ ನೋಟುಗಳ ಮೇಲೆ ರಾಷ್ಟ್ರಪಿತ ಆಗಿರುವಂತಹ ಮಹಾತ್ಮ ಗಾಂಧೀಜಿ ಅವರ ಫೋಟೋ ಇತ್ತಾ? ಅನ್ನೋ ಬಗ್ಗೆ ನಿಮಗೆ ಗೊಂದಲ ಇರಬಹುದು.
ಖಂಡಿತವಾಗಿ ಇರಲಿಲ್ಲ. ಹಾಗಿದ್ರೆ ಈ ನೋಟುಗಳ ಇತಿಹಾಸವನ್ನ ಇತಿಹಾಸದ ಪುಟಗಳಲ್ಲಿ ನಮಗೆ ತಿಳಿದ ವಿವರಗಳಂತೆ ತಿಳಿಯೋಣ ಬನ್ನಿ.
ಭಾರತದ ಕರೆನ್ಸಿ ನೋಟುಗಳ ಇತಿಹಾಸ!
ಈ ನೋಟುಗಳ ಪ್ರಕ್ರಿಯೆ ಪ್ರಾರಂಭವಾಗಿದ್ದು ಬ್ರಿಟಿಷ್ ರಾಜ್ಯದ ಕಾಲದಲ್ಲಿ ಎಂದು ಹೇಳಬಹುದಾಗಿದೆ. ಆರಂಭದಲ್ಲಿ ಭಾರತದಲ್ಲಿ ಚಾಲನೆಯಲ್ಲಿ ಇದ್ದಿದ್ದು ಕಿಂಗ್ ಜಾರ್ಜ್ VI ರವರ ಫೋಟೋ. ಇದಾದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಚಾಲನೆಗೆ ತಂದಂತಹ ಮೊದಲ ಕಾಗದದ ನೋಟಿನ ಮೌಲ್ಯ 5 ರೂಪಾಯಿ ಆಗಿತ್ತು ಹಾಗೂ ಇದು 1938 ರಲ್ಲಿ ರಿಲೀಸ್ ಆಗಿದ್ದು.
ನಮ್ಮ ಭಾರತ ದೇಶವನ್ನು ಬ್ರಿಟಿಷರು ಬಿಟ್ಟು ಹೋದ ನಂತರ ಕೂಡ ಕಿಂಗ್ ಜಾರ್ಜ್ ರವರ ಫೋಟೋ ಭಾರತದ ನೋಟುಗಳ ಮೇಲೆ ರಾರಾಜಿಸುತ್ತಿತ್ತು. 1949ರಲ್ಲಿ ಅಂದರೆ ಭಾರತವನ್ನು ಬ್ರಿಟಿಷರು ಬಿಟ್ಟು ತೊಲಗಿದ ನಂತರ ಎರಡು ವರ್ಷ ಆದ್ಮೇಲೆ ಮೊದಲ ಬಾರಿಗೆ ಒಂದು ರೂಪಾಯಿ ನೋಟನ್ನು ಡಿಸೈನ್ ಮಾಡಲಾಯಿತು.
ಇಲ್ಲಿ ಮೊದಲಿಗೆ ಅಶೋಕ ಸ್ತಂಭದಲ್ಲಿರುವಂತಹ ಸಿಂಹವನ್ನು ತೋರಿಸಲಾಯಿತು. ಈ ಸಂದರ್ಭದಲ್ಲಿ ನೋಟಿನಲ್ಲಿ ಗಾಂಧೀಜಿಯವರ ಫೋಟೋವನ್ನು ಅಳವಡಿಸುವ ಬಗ್ಗೆ ಮಾತುಕತೆ ಪ್ರಾರಂಭವಾಗುತ್ತದೆ.
1996 ರಲ್ಲಿ ಮಹಾತ್ಮ ಗಾಂಧಿ ಅವರ ಫೋಟೋ ಇರುವಂತಹ ಭಾರತದ ರೂಪಾಯಿ ನೋಟುಗಳನ್ನು ಬಳಸಲಾಯಿತು. ರೂಪಾಯಿ ನೋಟುಗಳಲ್ಲಿ ಮಹಾತ್ಮ ಗಾಂಧಿ ಅವರ ಫೋಟೋ ಮೊದಲ ಬಾರಿಗೆ ಕಂಡು ಬಂದಿದ್ದು 1969ರಲ್ಲಿ.
ಇದು ಅವರ ಶತಮಾನೋತ್ಸವದ ಸಂಭ್ರಮಾಚರಣೆಯ ನಿಮಿತ್ತವಾಗಿ ಬಿಡುಗಡೆ ಆಗಿರುವುದು. ಇದು ಮಹಾತ್ಮ ಗಾಂಧಿ ಅವರ ಫೋಟೋ ಭಾರತದ ರೂಪಾಯಿ ನೋಟುಗಳಲ್ಲಿ ಕಂಡುಬಂದಂತಹ ಇತಿಹಾಸದ ಚಿತ್ರಣ.
History of Indian Currency Notes, When Gandhi’s Photo First Appeared